ವೈದ್ಯಕಿಯ ಸೀಟು ಪಡೆದ ಎಕ್ಸಲಂಟ್​ ನೀಟ್​ ಅಕಾಡೆಮಿಯ ವಿದ್ಯಾಥಿರ್ಗಳ ಸನ್ಮಾನ  
ಧಾರವಾಡ

ಎಕ್ಸಲಂಟ್​ ನೀಟ್​ ಅಕಾಡೆಮಿ ವೈದ್ಯ ವಿದ್ಯಾಥಿರ್ಗಳ ತಯಾರಿಕಾ ಕೇಂದ್ರ

ಧಾರವಾಡ: ವಿದ್ಯಾಥಿರ್ಗಳು ಗುರಿ ಮುಟ್ಟಲು ಸಮರ್ಥ ಗುರು ಇರಬೇಕು. ವಿದ್ಯಾಥಿರ್ಗಳಲ್ಲಿ ಸಾಧಿಸುವ ಕಿಚ್ಚು ಇದ್ದಾಗ ಯಶಸ್ವಿಯಾಗುತ್ತಾರೆ. ವೈದ್ಯರು ಮತ್ತು ಶಿಕರನ್ನು ದೇವರೆನ್ನುವ ಕಾಲದಲ್ಲಿ ಧಾರವಾಡದ ಎಕ್ಸಲಂಟ್​ ನೀಟ್​ ಅಕಾಡೆಮಿಯು ವೈದ್ಯ ವಿದ್ಯಾಥಿರ್ಗಳನ್ನು ತಯಾರಿಸುವ ಕೇಂದ್ರವಾಗಿದೆ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್​ಎಸ್​ ಕಾಲೇಜಿನ ಸನ್ನಿಧಿ ಕಲಾೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕಿಯ ಸೀಟು ಪಡೆದ ಎಕ್ಸಲಂಟ್​ ನೀಟ್​ ಅಕಾಡೆಮಿಯ ವಿದ್ಯಾಥಿರ್ಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಲ್ಲಿ ಹೊಸತನವನ್ನು ಮೈಗೂಡಿಸಿಕೊಂಡು ಕ್ರಿಯಾಶೀಲರಾಗಬೇಕು. ತಂತ್ರಜ್ಞಾನದ ಮೋಡಿಯಲ್ಲಿ ನಮ್ಮ ಉನ್ನತ ಆದರ್ಶ, ಸಂಸತಿ, ಸಂಸ್ಕಾರ ಮರೆಯಬಾರದು ಎಂದರು.
ನಿವೃತ್ತ ಶಿಣ ನಿರ್ದೇಶಕ ಡಾ. ಎಸ್​.ಜಿ. ಪಾಟೀಲ ಮಾತನಾಡಿ, ಸನ್ಮಾನಗಳು ಸಾಧಕರಿಗೆ ಪ್ರೇರಕ ಶಕ್ತಿಗಳಾಗುತ್ತವೆ. ನಿರಂತರವಾಗಿ ಕಲಿಕೆ, ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಸವಾಲುಗಳಿಗೆ ಕುಂದದೆ ಎದುರಿಸಿ ಸಾಧನೆ ಶಿಖರ ಏರಬೇಕು. ಸಾಧಕನಿಗೆ ತಾಳ್ಮೆ, ಏಕಾಗ್ರತೆ ಹಾಗೂ ಛಲ ಇರಬೇಕು. ಜ್ಞಾನ ಯಾವುದೇ ಮಾರ್ಗದಿಂದ ಬಂದರೂ ಸ್ವೀಕರಿಸಬೇಕು ಎಂದರು.
ವಿಜಯಪುರದ ವಿಡಿಸಿಸಿ ಬ್ಯಾಂಕ್​ನ ನಿವೃತ್ತ ವ್ಯವಸ್ಥಾಪಕ ವಿ.ಡಿ. ಮಾದನಶೆಟ್ಟಿ ಮಾತನಾಡಿ, ಯಶಸ್ಸು ವಿದ್ಯಾಥಿರ್ಗಳ ಕೈಯಲ್ಲಿದೆ. ಬಯಕೆಗಳಿಗೆ ಬ್ರೇಕ್​ ಹಾಕಿ ಪ್ರಯತ್ನಕ್ಕೆ ವೇಗ ನೀಡಬೇಕು. ತಪ್ಪು ದಾರಿಗೆ ಹೋಗದಂತೆ ಉತ್ತಮ ಪಥದ ಮೇಲೆ ವಿದ್ಯಾಥಿರ್ ಜೀವನವೆಂಬ ರಥ ಸಾಗಬೇಕು ಎಂದರು.
ಅಧ್ಯತೆ ವಹಿಸಿದ್ದ ವಿಜಯಪುರ ಹಾಗೂ ಧಾರವಾಡದ ಎಕ್ಸಲಂಟ್​ ಸಮೂಹ ಶಿಣ ಸಂಸ್ಥೆಗಳ ಸಂಸ್ಥಾಪಕ ಚೇರ್ಮನ್​ ಬಸವರಾಜ ಕೌಲಗಿ ಮಾತನಾಡಿ, ವಿಜಯಪುರದಲ್ಲಿ ಬೆರಳೆಣಿಕೆಯಷ್ಟು ವಿದ್ಯಾಥಿರ್ಗಳಿಂದ ಪ್ರಾರಂಭವಾದ ಎಕ್ಸಲಂಟ್​ ಶಿಣ ಸಂಸ್ಥೆಯಲ್ಲಿಂದು ಸುಮಾರು 7 ವಿದ್ಯಾಥಿರ್ಗಳು, ಸುಮಾರು 1 ಸಾವಿರ ಶಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪಾಲಕರ ಒತ್ತಾಸೆಯ ಮೇರೆಗೆ ಧಾರವಾಡದಲ್ಲೂ ನವೋದಯ, ಕಿತ್ತೂರು, ಸೈನಿಕ ಶಾಲೆಗಳ ಮಕ್ಕಳ ತರಬೇತಿ ಕೇಂದ್ರದೊಂದಿಗೆ ಎಕ್ಸಲಂಟ್​ ನೀಟ್​ ಅಕಾಡೆಮಿಯನ್ನು ಪ್ರಾರಂಭಿಸಿ ಇಡೀ ಕರ್ನಾಟಕ ಬೆರಗುಗೊಳ್ಳುವಂತಹ ಲಿತಾಂಶ ನೀಡಿದೆ. ಇದಕ್ಕೆ ಭೋದಕ ಬೋಧಕೇತರ ಸಿಬ್ಬಂದಿಯ ಕೊಡುಗೆ ಮಹತ್ತರವಾಗಿದೆ ಎಂದರು.
ವೈದ್ಯಕಿಯ ಸೀಟು ಪಡೆದ 141 ಸಾಧಕ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಧಾರವಾಡದ ಎಕ್ಸಲಂಟ್​ ನೀಟ್​ ಅಕಾಡೆಮಿಯ ನಿರ್ದೇಶಕ ಸಚಿನ ಗಿರಿಯಪ್ಪನವರ, ಎಕ್ಸಲಂಟ್​ ಸಮೂಹ ಶಿಣ ಸಂಸ್ಥೆಯ ಕಾರ್ಯದಶಿರ್ ಭುವನ ಕೌಲಗಿ, ಆಡಳಿತಾಧಿಕಾರಿ ಶಿವಾನಂದ ಬಿರಾದಾರ, ಸಂಸ್ಥಾಪಕ ನಿರ್ದೇಶಕ ಪ್ರವಿಣ ಗಿರಿಯಪ್ಪನವರ, ನೀಟ್​ ಅಕಾಡೆಮಿ ಆಡಳಿತಾಧಿಕಾರಿ ಜಗದೀಶ ಚಿತ್ತರಗಿ, ಪಿ.ಯು. ಕಾಲೇಜ್​ ಪ್ರಾಚಾರ್ಯ ಉಮೇಶ ಪುರೋಹಿತ, ಶೈಣಿಕ ಸಂಯೋಜಕ ಪ್ರತಾಪ್​ ಟಿ.ಆರ್​. ಇದ್ದರು.
ಸ್ನೇಹಾ ಪ್ರಾಥಿರ್ಸಿದರು. ಉಮೇಶ ಪುರೋಹಿತ ಸ್ವಾಗತಿಸಿದರು. ಪ್ರತಾಪ್​ ಟಿ.ಆರ್​. ಹಾಗೂ ಜಗದೀಶ ಚಿತ್ತರಗಿ ವಾಷಿರ್ಕ ವರದಿ ವಾಚಿಸಿದರು. ಶರಣಗೌಡ ಪಾಟೀಲ ನಿರೂಪಿಸಿದರು. ಮುಸ್ತಾಕ್​ ಮಲಘಾಣ ವಂದಿಸಿದರು.