excellance award ಹುಬ್ಬಳ್ಳಿಯ ಕೆಎಂಸಿಆರ್ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಡಾ. ರಾಮ ಕೌಲಗುಡ್ಡ, ಡಾ. ಅರುಣ ಶೆಟ್ಟರ್ ಅವರು ದೆಹಲಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶ್ರೇಷ್ಠತಾ ಪ್ರಶಸ್ತಿ ಸ್ವೀಕರಿಸಿದರು.
ಹುಬ್ಬಳ್ಳಿ: excellance award ಇಲ್ಲಿಯ ಕರ್ನಾಟಕ ವೈದ್ಯಕಿಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕೆಎಂಸಿಆರ್ಐ) ಬಹು-ಶಿಸ್ತೀಯ ಸಂಶೋಧನಾ ಘಟಕವು (ಎಂಆರ್ಯು) ಇತ್ತೀಚೆಗೆ ದೆಹಲಿಯಲ್ಲಿ ಏರ್ಪಡಿಸಿದ್ದ ಮೆಡಿಕಲ್ ಕಾಲೇಜ್ ರೀಸರ್ಚ್ ಕನೆಕ್ಟ್ ಸಮ್ಮೇಳನದಲ್ಲಿ ಅತ್ಯುತ್ತಮ ಸಾಧನೆಗಾಗಿ "ಶ್ರೇಷ್ಠತಾ ಪ್ರಶಸ್ತಿ' (ಎಕ್ಸಲ್ಲನ್ಸ್ ಅವಾರ್ಡ್) ಮತ್ತು ಶ್ರೇಷ್ಠತೆಯ ಪ್ರಮಾಣಪತ್ರ ಪಡೆದಿದೆ.
ದೇಶಾದ್ಯಂತ ಇರುವ 123 ಎಂಆರ್ಯುಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯ ಹೊಂದಿದ ಎಂಟು ಕೇಂದ್ರಗಳಿಗೆ ಕೇಂದ್ರ ಸರ್ಕಾರದಿಂದ ಪ್ರತಿಷ್ಠಿತ ಶ್ರೇಷ್ಠತಾ ಪ್ರಶಸ್ತಿ ಲಭಿಸಿದೆ. ಅವುಗಳಲ್ಲಿ ಕೆಎಂಸಿಆರ್ಐ ಎಂಆರ್ಯು ಒಂದಾಗಿದೆ.
ಆರೋಗ್ಯ ಸಂಶೋಧನಾ ಇಲಾಖೆಯ ವತಿಯಿಂದ ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ವೈದ್ಯಕಿಯ ಮಹಾವಿದ್ಯಾಲಯಗಳಲ್ಲಿ ಡಿಎಚ್ಆರ್ ವಿಭಾಗದ ಅಡಿಯಲ್ಲಿ ಸ್ಥಾಪಿಸಲಾದ 123 ಬಹು- ಶಿಸ್ತೀಯ ಸಂಶೋಧನಾ ಘಟಕಗಳು ಭಾಗವಹಿಸಿದವು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿದರು.