encroached ಹುಬ್ಬಳ್ಳಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ  
ಧಾರವಾಡ

encroachedಸರ್ಕಾರಿ ಜಾಗ ಅತಿಕ್ರಮಿಸಿದ್ದವರ ಮೇಲೆ ಕೇಸ್

ಹುಬ್ಬಳ್ಳಿ: ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಾಗವನು ಅತಿಕ್ರಮಿಸಿದ encroached ಆರೋಪದಡಿ ತಾಲೂಕಿನ ಬುಡರಸಿಂಗಿ ಗ್ರಾಮದ 10 ಜನರ ವಿರುದ್ಧ ಹುಬ್ಬಳ್ಳಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ಮೈನುದ್ದೀನ್, ಸದಾನಂದ, ರಾಜೀವ, ಪ್ರಕಾಶ, ಉಮೇಶ, ಶಿವಾನಂದ, ದಾಕ್ಷಾಯಣಿ, ಶಶಿಕಲಾ, ವಿನಾಯಕ, ಅರವಿಂದ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಎಲ್ಲರೂ ಕೂಡಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಅತಿಕ್ರಮವಾಗಿ ಪ್ರವೇಶ ಮಾಡಿ ಸರ್ಕಾರಿ ಜಮೀನು ತಮ್ಮದೆಂದು ಸುಳ್ಳು ಹೇಳಿ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕಂದಾಯ ಇಲಾಖೆಯ ಗುರುರಾಜ ದೊಡ್ಡವಾಡ, ಸಾಧಿಕ್ ಅಮ್ಮಿನಭಾವಿ ದೂರು ದಾಖಲಿಸಿದ್ದಾರೆ.