ಜೆಎಸ್ ಎಸ್ ಸನ್ನಿಧಿ ಹಾಲ್ ನಲ್ಲಿ ವಾತ್ಸಲ್ಯ ವಂದನ' ಕಾರ್ಯಕ್ರಮ 
ಧಾರವಾಡ

ಹಿರಿಯರು ಕುಟುಂಬದ ಅಮೂಲ್ಯ ಆಸ್ತಿ

ಧಾರವಾಡ: ಮನೆಯಲ್ಲಿ ಅಜ್ಜ&ಅಜ್ಜಿಯಂದಿರು ಕುಟುಂಬದ ಅಮೂಲ್ಯ ಆಸ್ತಿ ಇದ್ದಂತೆ. ಅವರು ತಮ್ಮ ಜೀವನದ ಅನುಭವಗಳನ್ನು ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಹಂಚಿಕೊಳ್ಳುತ್ತಾರೆ. ಪ್ರೀತಿ, ಮಮತೆ, ಸಂಸ್ಕಾರ ಹಾಗೂ ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತಾರೆ ಎಂದು ಹುಬ್ಬಳ್ಳಿಯ ಕೆಎಂಸಿಐಆರ್​ನ ಡಾ. ಶಿವಾನಂದ ಹಿರೇಮಠ ಹೇಳಿದರು.
ಜೆಎಸ್​ಎಸ್​ ಶ್ರೀ ಮಂಜುನಾಥೇಶ್ವರ ಸೆಂಟ್ರಲ್​ ಶಾಲೆಯಿಂದ ಸನ್ನಿ-ಧಿ ಕಲಾ ಕ್ಷೇತ್ರದಲ್ಲಿ 1ರಿಂದ 5ನೇ ತರಗತಿಯ ಮಕ್ಕಳು, ಅಜ್ಜ-ಅಜ್ಜಿಯಂದಿರಿಗೆ ಆಯೋಜಿಸಿದ್ದ "ವಾತ್ಸಲ್ಯ ವಂದನ' ವಿನೂತನ ನಮನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಹಿರಿಯರು ಮಕ್ಕಳಿಗೆ ಕಥೆಗಳನ್ನು ಹೇಳಿ ನಮ್ಮ ಸಂಸತಿ ಮತ್ತು ಪರಂಪರೆ ಪರಿಚಯಿಸುತ್ತಾರೆ. ಕುಟುಂಬದ ಸದಸ್ಯರ ನಡುವೆ ಪ್ರೀತಿ ಮತ್ತು ಒಗ್ಗಟ್ಟನ್ನು ಹೆಚ್ಚಿಸುವಲ್ಲಿ ಅಜ್ಜ&ಅಜ್ಜಿಯಂದಿರ ಪಾತ್ರ ಬಹಳ ಮಹತ್ವದ್ದಾಗಿದೆ. ಆದ್ದರಿಂದ ನಾವು ಅವರನ್ನು ಗೌರವದಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರು.
ಜೆಎಸ್​ಎಸ್​ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಮಾತನಾಡಿದರು. ಮೊಮ್ಮಕ್ಕಳು ತಮ್ಮ ಅಜ್ಜ-ಅಜ್ಜಿಗೆ ಹೂವು ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಇದೇ ವೇಳೆ ಅಜ್ಜ-ಅಜ್ಜಿ ಸಿಹಿ ತಿನ್ನಿಸಿ ಆಶೀರ್ವದಿಸಿದರು. ಸಾವಿರಕ್ಕೂ ಹೆಚ್ಚು ಅಜ್ಜ-ಅಜ್ಜಿಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಳಿಕ ಶಾಲಾ ಮಕ್ಕಳು ಸಾಂಸತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಶಾಲೆ ಪ್ರಾಚಾಯೆರ್ ರಜನಿ ಪಾಟೀಲ ಸ್ವಾಗತಿಸಿದರು. ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ವೇದಿಕೆಯಲ್ಲಿದ್ದರು. ವಾಣಿಶ್ರೀ ಕೋಳಿವಾಡ, ಅಗಸ್ಟಿನ್​ ರ್ನಾಂಡಿಸ್​ ನಿರೂಪಿಸಿದರು.