ಶಾಂತವೀರಪ್ಪ ಮೆಣಸಿನಕಾಯಿ ಮೂರ್ತಿಗೆ ಮಾಲಾರ್ಪಣೆ  
ಧಾರವಾಡ

ರೈತರು, ಗ್ರಾಹಕರಿಗೆ ಪರಿಣಾಮಕಾರಿ ಸೇವೆ

ಧಾರವಾಡ: ಕೆಸಿಸಿ ಬ್ಯಾಂಕ್​ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಡುವಿನ ಅಂತರ ಕಡಿಮೆಗೊಳಿಸುವ ಮೂಲಕ ರೈತರು ಮತ್ತು ಗ್ರಾಹಕರಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಸಂಘಗಳಿಗೆ ಸದ್ಯದಲ್ಲೇ ಷೇರು ಸಹಾಯಧನ ಮತ್ತು ಡಿವಿಡೆಂಡ್​ ನೀಡಲಾಗುವುದು ಎಂದು ಕೆಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.
ಕೆಸಿಸಿ ಬ್ಯಾಂಕ್​ ವತಿಯಿಂದ ಸೋಮವಾರ ಆಯೋಜಸಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ಯಾಂಕ್​ 2025- 2026ನೇ ಆಥಿರ್ಕ ವರ್ಷದಲ್ಲಿ 22 ಕೋಟಿ ರೂಪಾಯಿ ಲಾಭ ಗಳಿಸಿದೆ. 5 ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಲಾಭದ ಪ್ರಮಾಣವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಬ್ಯಾಂಕ್​ನಿಂದ ಮಂಜೂರಾದ ವಾಹನ ಸಾಲವನ್ನು ಗ್ರಾಹಕರಿಗೆ ಹಸ್ತಾಂತರಿಸಿದರು.
ಬ್ಯಾಂಕ್​ ಸಿಇಒ ಡಾ. ಸುನೀತಾ ಸಿದ್ರಾಮ, ಮಲ್ಲಿಕಾರ್ಜುನ ಹೊರಕೇರಿ, ಸಿದ್ದಪ್ಪ ಸಪೂರಿ, ನಾಗಪ್ಪ ಸಂಕದ, ಪ್ರಧಾನ ವ್ಯವಸ್ಥಾಪಕ ಎಸ್​.ವಿ. ಹೂಗಾರ, ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಹಕರು ಇದ್ದರು.
ಇದೇವೇಳೆ ಪ್ರಧಾನ ಕಚೇರಿ ಎದುರಿನ ವೃತ್ತದಲ್ಲಿರುವ ಬ್ಯಾಂಕ್​ ಸಂಸ್ಥಾಪಕರಲ್ಲೊಬ್ಬರಾದ ಶಾಂತವೀರಪ್ಪ ಮೆಣಸಿನಕಾಯಿ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.