ಹುಬ್ಬಳ್ಳಿ ಸಮೀಪದ (tech park) ತಿಮ್ಮಾಪುರ ಎಂಎಸ್​ ವಿಜ್ಞಾನ ಹಾಗೂ ತಂತ್ರಜ್ಞಾನ ಪಾರ್ಕ್​ಗೆ ಭೇಟಿ ನೀಡಿದ ಕೆಎಲ್​ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು. 
ಧಾರವಾಡ

ಟೆಕ್ನಾಲಜಿ (tech park) ಪಾರ್ಕ್​ಗೆ ಶೈಕ್ಷಣಿಕ ಭೇಟಿ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದ ನೇರ ಅನುಭವ
  • ವಿಜ್ಞಾನ ಗ್ಯಾಲರಿ, ವಿವಿಧ ಆವಿಷ್ಕಾರಗಳ ನೈಜ ಕಾರ್ಯವಿಧಾನದ ಪರಿಚಯ
  • ನವೀನ ಕಲ್ಪನೆಗಳತ್ತ ಮನಸ್ಸನ್ನು ಕೊಂಡೊಯ್ಯಲು ಸಹಕಾರಿ
ಹುಬ್ಬಳ್ಳಿ: ಇಲ್ಲಿಯ ಮಂಜುನಾಥನಗರ ಕೆಎಲ್​ಇ ಸಂಸ್ಥೆಯ ಇಂಗ್ಲಿಷ್​ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಸಮೀಪದ ತಿಮ್ಮಾಪುರದಲ್ಲಿರುವ (tech park) ಎಂಎಸ್​ ವಿಜ್ಞಾನ ಹಾಗೂ ತಂತ್ರಜ್ಞಾನ ಪಾರ್ಕ್​ಗೆ ಭೇಟಿ ನೀಡಿದರು. ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದ ನೇರ ಅನುಭವ ಪಡೆದುಕೊಂಡರು.
ವಿದ್ಯಾರ್ಥಿಗಳಿಗೆ ನವೀನ ಶಕ್ತಿ, ರೋಬೋಟಿಕ್ಸ್​, ಕೃತಕ ಬುದ್ಧಿಮತ್ತೆ, ವಿಜ್ಞಾನ ಗ್ಯಾಲರಿ ಮತ್ತು ವಿವಿಧ ಆವಿಷ್ಕಾರಗಳ ನೈಜ ಕಾರ್ಯವಿಧಾನದ ಪರಿಚಯವನ್ನು ಈ ಭೇಟಿ ಮಾಡಿಸಿತು.
ವಿಜ್ಞಾನ ಶಿಕ್ಷಕಿ ನಿವೇದಿತಾ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್​ನಲ್ಲಿ ಅನೇಕ ವಿಷಯಗಳನ್ನು ಕಲಿಯಲು ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು ಉತ್ತಮ ಅವಕಾಶಗಳಿವೆ ಎಂದರು.