growth ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಮಾಧ್ವ ಮಹಾ ಮಂಡಳಿ ವಿದ್ಯಾರ್ಥಿ ನಿಲಯದ ಷಷ್ಠಿಪೂರ್ತಿ ಮಹೋತ್ಸವ ಹಾಗೂ ನವೀಕೃತ ಕೊಠಡಿಗಳ ಉದ್ಘಾಟನೆಯನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನೆರವೇರಿಸಿದರು.  
ಧಾರವಾಡ

ಲೌಕಿಖ, ಬೌದ್ಧಿಕ ಬೆಳವಣಿಗೆಗೆ ಶಿಕ್ಷಣ ಅಗತ್ಯ growth

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಹಲವರು ದಾನಕೊಟ್ಟು, ದಾನವನ್ನು ಸಹ ಕೊಡಿಸುತ್ತಾರೆ.
  • ಉತ್ತಮ ಶಿಕ್ಷಣ ಪಡೆದು ಈ ಸಂಸ್ಥೆಯನ್ನು ಬೆಳೆಗುಸುತ್ತಿದ್ದಾರೆ.
  • ಹಿಂದು ಸಮಾಜದ ಉಳಿವಿಗೆ ಇಂತಹ ವಿದ್ಯಾರ್ಥಿ ನಿಲಯಗಳ ಅವಶ್ಯಕತೆ ಇದೆ
ಹುಬ್ಬಳ್ಳಿ :
growth ಸಮಾಜ ಲೌಕಿಖ ಹಾಗೂ ಬೌದ್ಧಿಕವಾಗಿ ಮುಂದೆ ಬರಬೇಕು. ಅದಕ್ಕೆ ಶಿಕ್ಷಣ ಬಹಳ ಅಗತ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ವಿದ್ಯಾನಗರದಲ್ಲಿನ ಅಖಿಲ ಭಾರತ ಮಾಧ್ವ ಮಹಾ ಮಂಡಳಿ ವಿದ್ಯಾರ್ಥಿ ನಿಲಯದ ಷಷ್ಠಿಪೂರ್ತಿ ಮಹೋತ್ಸವ ಹಾಗೂ ನವೀಕೃತ ಕೊಠಡಿಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಮುಂದೆ ಬರಬೇಕೆಂಬ ಕಾರಣಕ್ಕಾಗಿ ಬ್ರಾಹ್ಮಣ್ಯ ಬಿಡಬಾರದು. ಗಾಯತ್ರಿ ಮಂತ್ರದ ಅನುಷ್ಠಾನ ಬಿಟ್ಟರೆ ಬ್ರಾಹ್ಮಣನೆಂದು ಹೇಳಿಕೊಳ್ಳಲು ಯಾವುದೇ ಅರ್ಹತೆ ಇರುವುದಿಲ್ಲ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಶುದ್ಧ ಆಹಾರ ಪೂರೈಸುವ ಉದ್ದೇಶದಿಂದ ಈ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಭೂಮಿ ದಾನ ಮಾಡಿದರು.
ಸಮಾನ ಮನಸ್ಕರನ್ನು ಕೂಡಿಸಿ ನಮ್ಮ ಗುರುಗಳು ವಿದ್ಯಾರ್ಥಿ ನಿಲಯ ಆರಂಭಕ್ಕೆ ಕಾರಣರಾದರು. ಈ ನಿಲಯದಿಂದ ಸಮಾಜಕ್ಕೆ ಸಹಸ್ರಾರು ಜನ ಉತ್ತಮ ನಾಗರಿಕರು ಲಭಿಸಿದ್ದಾರೆ ಎಂದರು.
ನಿಲಯದ ಹಳೇ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಈ ಸಂಸ್ಥೆಯನ್ನು ಬೆಳೆಗುಸುತ್ತಿದ್ದಾರೆ. ಕೆಲವರು ದಾನ ನೀಡಲು ಸಾಧ್ಯ. ಇನ್ನೂ ಕೆಲವರಿಗೆ ದಾನ ಕೊಡಿಸಲು ಸಾಧ್ಯ.
ಹಲವರು ದಾನಕೊಟ್ಟು, ದಾನವನ್ನು ಸಹ ಕೊಡಿಸುತ್ತಾರೆ. ಅಂತಹ ಜನರಿಗೆ ಸಂಸ್ಥೆ ಈ ಮಟ್ಟಕ್ಕೆ ಬೆಳೆಯುತ್ತಿದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಹಿಂದು ಸಮಾಜ ಕಟ್ಟಿ ಬೆಳೆಸಿದ ವಿಶ್ವೇಶ್ವರತೀರ್ಥ ಶ್ರೀಗಳು ವಿದ್ಯಾರ್ಥಿ ನಿಲಯ ಕಟ್ಟಿದರು. ಹಿಂದು ಸಮಾಜದ ಉಳಿವಿಗೆ ಇಂತಹ ವಿದ್ಯಾರ್ಥಿ ನಿಲಯ ಹಾಗೂ ಕಾಲೇಜುಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.
ಹಿಂದು ವಿದ್ಯಾರ್ಥಿಗಳು ತಮ್ಮ ಧರ್ಮ ಕಾಪಾಡಿಕೊಂಡು ಶಿಕ್ಷಣ ಕಲಿಯಬೇಕು. ಹಿಂದು ಸಮಾಜದ ಉಳಿವಿಗಾಗಿ ಈ ಮಾದರಿಯ ಹಲವಾರು ಸಂಸ್ಥೆ ಗಳನ್ನು ಶ್ರೀಗಳು ಕಟ್ಟಿದ್ದಾರೆ.
ವಿದ್ಯಾರ್ಥಿಗಳು ಹೋಟೆಲ್ ಅಥವಾ ಇನ್ನಿತರೆಡೆ ವಾಸ್ತವ್ಯ ಮಾಡಿ ವಿದ್ಯಾರ್ಜನೆ ಮಾಡುತ್ತಿದ್ದರು. ಅಂತಹ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ, ಸಂಸ್ಕಾರದ ಜತೆಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಕಾರಣಕ್ಕಾಗಿ ಈ ವಿದ್ಯಾರ್ಥಿ ನಿಲಯವನ್ನು ಶ್ರೀಗಳು ಆರಂಭಿಸಿದರು ಎಂದರು.
ಇತರ ಸಮಾಜಗಳು ಆಯಾ ಮಠಗಳಿಗೆ ಸೀಮಿತವಾಗಿದ್ದ ದಿನಗಳಲ್ಲಿ ವಿಶ್ವೇಶ್ವರತೀರ್ಥ ಶ್ರೀಗಳು ಎಲ್ಲ ಸಮಾಜ ಹಾಗೂ ಮಠಗಳನ್ನು ಒಗ್ಗೂಡಿಸುವ ಕಾರ್ಯ ಮಾಡಿದರು ಎಂದು ತಿಳಿಸಿದರು.
ಪ್ರಾಸ್ರಾವಿಕವಾಗಿ ಮಾತನಾಡಿದ ಅನಂತ ಪದ್ಮನಾಭ ಐತಾಳ, 8 ಕೊಠಡಿಗಳಿಂದ ಆರಂಭವಾದ ವಿದ್ಯಾರ್ಥಿ ನಿಲಯದಲ್ಲಿ ಇಂದು 78 ಕೊಠಡಿಗಳು ಇವೆ. ಈ ನಿಲಯ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ ಎಂದರು.
ಇದಕ್ಕೂ ಮೊದಲು ಹಳೇ ಇನ್​ಕಮ್ ಟ್ಯಾಕ್ಸ್ ಕಚೇರಿ ಬಳಿಯ ಶ್ರೀ ಮಾರುತಿ ಮಂದಿರದಿಂದ ವಿಜೆಎಂ ವಿದ್ಯಾರ್ಥಿ ನಿಲಯದವರೆಗೆ ಉಭಯ ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು. ವಿದ್ಯಾರ್ಥಿ ನಿಲಯಕ್ಕೆ ದಾನ ನೀಡಿದವರನ್ನು ಹಾಗೂ ಹಳೇಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.