ಫೇಸ್ ಆಧಾರಿತ ವಿಧಾನದ ಮೂಲಕ ಪಿಎಂ ಕಿಸಾನ್ ಇ- ಕೆವೈಸಿ ಮಾಡುತ್ತಿರುವ ಧಾರವಾಡ ಕೃಷಿ ಇಲಾಖೆ ಸಿಬ್ಬಂದಿ.
ಮಂಜುನಾಥ ಎಸ್. ಅಂಗಡಿ ಧಾರವಾಡ
ಪಿಎಂ ಕಿಸಾನ್ ಯೋಜನೆಯ ಅರ್ಹ ರೈತರಿಗೆ ಮುಂದಿನ 24ನೇ ಕಂತು ಜಮೆಯಾಗಬೇಕಾದರೆ ಇ- ಕೆವೈಸಿ ಕಡ್ಡಾಯಗೊಳಿಸಲಾಗಿದೆ. ನಕಲಿ ಫಲಾನುಭವಿಗಳನ್ನು ಪಟ್ಟಿಯಿಂದ ಹೊರಗಿಡುವುದು ಮತ್ತು ಹಾಗೂ ಅರ್ಹ ರೈತರಿಗೆ ಪಾರದರ್ಶಕವಾಗಿ ಹಣ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮಾವಳಿ ರೂಪಿಸಿ ಇ& -ಕೆವೈಸಿ ಪ್ರಕ್ರಿಯೆ ಜಾರಿಗೊಳಿಸಿದೆ.
ಈ ಹಿಂದೆ ಆಧಾರ್ ಒಟಿಪಿ ಮೂಲಕವೂ ಇ- ಕೆವೈಸಿ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ, ಫಲಾನುಭವಿಗಳ ನಿಖರ ಪರಿಶೀಲನೆ ಹಾಗೂ ಯೋಜನೆಯ ಹಣ ಅರ್ಹರಿಗೇ ತಲುಪುವುದನ್ನು ಖಚಿತಪಡಿಸುವ ಉದ್ದೇಶದಿಂದ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ- ಕೆವೈಸಿ ಜಾರಿಗೊಳಿಸಲಾಗುತ್ತಿದೆ.
ಕೇಂದ್ರ ಸರ್ಕಾರದಿಂದ ಇದುವರೆಗೆ ಪಿಎಂ ಕಿಸಾನ್ನ 23 ಕಂತುಗಳ ಹಣ ಜಮೆಯಾಗಿದೆ. 24ನೇ ಕಂತು ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಸರ್ಕಾರದ ನೂತನ ಮಾರ್ಗಸೂಚಿಗಳ ಅನ್ವಯ ಮುಂದಿನ ಕಂತು ರೈತರ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ಜಮೆಯಾಗಬೇಕಾದರೆ ಫಲಾನುಭವಿಗಳ ಇ-& ಕೆವೈಸಿ ಅನಿವಾರ್ಯ. ಅರ್ಹ ಫಲಾನುಭವಿಗಳು ಸೆಪ್ಟೆಂಬರ್ವೊಳಗೆ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-& ಕೆವೈಸಿ ಮಾಡಿಸಬೇಕು.
ರಾಜ್ಯಾದ್ಯಂತ ಇ- ಕೆವೈಸಿ ಅಭಿಯಾನ:
ಡಿಬಿಟಿ ಮೂಲಕ ಫಲಾನುಭವಿಗಳಿಗೆ ಹಣ ಜಮೆಯಾಗುತ್ತಿದ್ದರೂ ಮುಂದಿನ ಕಂತು ಬಿಡುಗಡೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಎನ್ಪಿಸಿಐ ಜತೆ ಲಿಂಕ್ ಮಾಡಿಸಿದ್ದರೂ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ- ಕೆವೈಸಿ ಮಾಡಿಸಲೇಬೇಕು. ಮೃತ ಫಲಾನುಭವಿಗಳನ್ನು ಕೈಬಿಟ್ಟು, ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಇದರ ಉದ್ದೇಶ. ಈ ಇ- ಕೆವೈಸಿ ಅಭಿಯಾನ ರಾಜ್ಯಾದ್ಯಂತ ನಡೆಯುತ್ತಿದೆ.
* ಇ- ಕೆವೈಸಿ ಮಾಡಿಸುವುದು ಹೇಗೆ?:
ಫಲಾನುಭವಿಗಳು ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ವಿಧಾನಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಬಯೋಮೆಟ್ರಿಕ್ ಮೂಲಕ ಇ- ಕೆವೈಸಿಯನ್ನು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ಮತ್ತು ರಾಜ್ಯ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸಬಹುದು. ಬೆರಳಚ್ಚಿನ ಮೂಲಕ ದೃಢೀಕರಣ ಸಾಧ್ಯವಾಗದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಫೇಸ್ ಆಧಾರಿತ (ೇಸ್ ಅಥೆಂಟಿಕೇಶನ್) ವಿಧಾನ ಸರಳ ಆಯ್ಕೆಯಾಗಿದೆ. ಮೊಬೈಲ್ನಲ್ಲೇ ಫೇಸ್ ಆಧಾರಿತ ಇ- ಕೆವೈಸಿ ಮತ್ತೊಂದು ವಿಧಾನ. ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಮೊಬೈಲ್ ಅಪ್ಲಿಕೇಶನ್ನಲ್ಲೂ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ನಿಂದ "ಪಿಎಂ-ಕಿಸಾನ್' ಮೊಬೈಲ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್ಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು. ಆಧಾರ್ ಸಂಖ್ಯೆ ನಮೂದಿಸಿ ಮುಖವನ್ನು ಸ್ಕಾನ್ ಮಾಡಲು ಒಪ್ಪಿಗೆ ನೀಡಿದರೆ ಇ- ಕೆವೈಸಿ ರ್ಪೂಣಗೊಳ್ಳುತ್ತದೆ.
3 ಕಂತುಗಳಲ್ಲಿ 6,000 ರೂ. ಸಹಾಯಧನ:
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019ರ ಫೆಬ್ರವರಿಯಿಂದ ಅನುಷ್ಠಾನಗೊಳಿಸಿದೆ. 2019ರ ಫೆಬ್ರವರಿಗೂ ಮೊದಲು ಸಾಗುವಳಿ ಭೂಮಿ ಹೊಂದಿರುವ ರೆೈತ ಕುಟುಂಬಕ್ಕೆ ನೆರವಾಗಲು ವಾಷಿರ್ಕ 6,000 ರೂ. ಆಥಿರ್ಕ ನೆರವು ನೀಡಲಾಗುತ್ತಿದೆ. 2000 ರೂ.ಗಳಂತೆ 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ (ಡಿಬಿಟಿ) ಜಮೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರತಿಯೊಬ್ಬ ಪಿಎಂ ಕಿಸಾನ್ ಯೋಜನೆ ಫಲಾನುಭವಿಯು ಕೂಡಲೇ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ- ಕೆವೈಸಿ ಮಾಡಿಸಬೇಕು. ಮಾಹಿತಿಗೆ ಹತ್ತಿರದ ಸಿಎಸ್ಸಿಸಿ, ಗ್ರಾಮ ಒನ್, ಕರ್ನಾಟಕ ಒನ್, ರೈತ ಸಂಪರ್ಕ ಕೇಂದ್ರಗಳು ಅಥವಾ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಬೇಕು.
— ಮಂಜುನಾಥ ಬಿ. ಅಂತರವಳ್ಳಿ, ಕೃಷಿ ಜಂಟಿ ಕೃಷಿ ನಿರ್ದೇಶಕರು, ಧಾರವಾಡ