ಹುಬ್ಬಳ್ಳಿಯಲ್ಲಿ ಬುಧವಾರ drugs awareness ಏರ್ಪಡಿಸಿದ್ದ ಬೃಹತ್ ಜಾಗೃತಿ ಜಾಥಾಕ್ಕೆ ಎಸಿಪಿಗಳಾದ ಶಿವಾನಂದ ಛಲವಾದಿ, ಉಮೇಶ ಚಿಕ್ಕಮಠ ಚಾಲನೆ ನೀಡಿದರು.
ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ drugs awareness ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ನಿಮಿತ್ತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಎಲ್ಲ ಔಷಧಶಾಸ್ತ್ರ ಮಹಾವಿದ್ಯಾಲಯಗಳು ಹಾಗೂ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದಲ್ಲಿ ಬೃಹತ್ ಜಾಗೃತಿ ಜಾಥಾವನ್ನು ಬುಧವಾರ ಏರ್ಪಡಿಸಲಾಗಿತ್ತು.
ಜಾಥಾವು ತೋಳನಕೆರೆ, ವಿದ್ಯಾನಗರದಿಂದ ಆರಂಭಗೊಂಡು ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಬಳಿ ಸಂಪನ್ನಗೊಂಡಿತು. ಇದೇ ವೇಳೆ ಭಾಗವಹಿಸಿದವರಿಗೆ ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಿಲ್ಲಾಧಿಕಾರಿ ಆರ್. ಸ್ನೇಹಲ್, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್‌ಪಿ ಗುಂಜನ್ ಆರ್ಯ, ಡಿಸಿಪಿ ಶ್ರುತಿ ಎನ್.ಎಸ್., ಎಸಿಪಿಗಳಾದ ಶಿವಾನಂದ ಛಲವಾದಿ, ಉಮೇಶ ಚಿಕ್ಕಮಠ, 500ಕ್ಕೂ ಹೆಚ್ಚು ಜನರು ಜಾಥಾದಲ್ಲಿ ಭಾಗವಹಿಸಿದ್ದರು.