ಹುಬ್ಬಳ್ಳಿ ವಿದ್ಯಾನಗರ ಸರ್ಕಾರಿ (Drugs) ಪಾಲಿಟೆಕ್ನಿಕ್ನಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಸಾಗಾಟ ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ಅತಿಥಿಗಳು ಗಿಡ ನೆಟ್ಟರು. ಡಾ. ಶಿವರಾಜ ಕಟಕಭಾವಿ, ಡಾ. ಸಂಜೀವಕುಮಾರ ಚೌಗುಲಾ, ಸನ್ಮತಿ ಸುಗಂಧಿ, ಮೇನಕಾ ನಾಯಕ, ಇತರರು ಇದ್ದರು.
ಹುಬ್ಬಳ್ಳಿ: ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ (Drugs)ದೂರವಿದ್ದು, ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ನಡೆಸಬೇಕು ಎಂದು ಎಸಿಪಿ ಡಾ. ಶಿವರಾಜ ಕಟಕಭಾವಿ ಕರೆ ನೀಡಿದರು.
ವಿದ್ಯಾನಗರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಸಾಗಾಟ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ಯುವ ಜನರ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ವಿವರಿಸಿದರು.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆ ಹಿನ್ನೆಲೆಯಲ್ಲಿ ನಕಲಿ ವೆಬ್ಸೈಟ್ಗಳು, ಫಿಶಿಂಗ್ ಲಿಂಕ್ಗಳು, ಒಟಿಪಿ ವಿನಿಮಿಯ ಇತ್ಯಾದಿಗಳ ಬಗ್ಗೆ ಎಚ್ಚರಿಕೆ ವಹಿಸಿಬೇಕು. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಯಾವುದೇ ಸೈಬರ್ ವಂಚನೆ ಸಂಭವಿಸಿದಲ್ಲಿ ತಕ್ಷಣವೇ ಪೊಲೀಸ್ ಠಾಣೆಯನ್ನು ಸಂರ್ಪಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಸಂಜೀವಕುಮಾರ ಚೌಗುಲಾ ಮಾತಮಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ, ಸಾಮಾಜಿಕ ಹೊಣೆಗಾರಿಕೆ ಮತ್ತು ಡಿಜಿಟಲ್ ಸುರಕ್ಷತೆಯ ಬಗ್ಗೆ ಅರಿವು ಹೊಂದಿರಬೇಕು. ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಾನೂನು ಪಾಲನೆ ಹಾಗೂ ಸುರಕ್ಷಿತ ಜೀವನಶೈಲಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
ಕುಲಸಚಿವೆ ರೂಪಾ ಯಾವಗಲ್, ರುದ್ರಪ್ಪ ಬಡಿಗೇರ, ಮಂಜುನಾಥ ಎಸ್., ಶ್ರೀಕೃಷ್ಣ ಬ್ಯಾಡಗಿ, ಇತರರು ಇದ್ದರು. ಉಪನ್ಯಾಸಕಿ ಸನ್ಮತಿ ಸುಗಂಧಿ ಸ್ವಾಗತಿಸಿದರು, ಉಪನ್ಯಾಸಕಿ ಮೇನಕಾ ನಾಯಕ ವಂದಿಸಿದರು.