ಸ್ವದೇಶಿ ತಂತ್ರಜ್ಞಾನದಿಂದ (Driverless) ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಚಾಲಕ ರಹಿತ (ಡ್ರೖೆವರ್ಲೆಸ್) ಫಾಮುಲಾ ರೇಸಿಂಗ್ ಕಾರ್ನೊಂದಿಗೆ ಐಐಟಿ ಬಾಂಬೆ ವಿದ್ಯಾರ್ಥಿಗಳ ತಂಡ.
- driverless
- student formula
ಫಾಮುಲಾ ಸ್ಟೂಡೆಂಟ್ ಪೋರ್ಚುಗಲ್-2026 ಸ್ಪರ್ಧೆಯಲ್ಲಿ ಐಐಟಿ ಬಾಂಬೆ
ವಿದ್ಯಾರ್ಥಿಗಳ ತಂಡವು ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಚಾಲಕ ರಹಿತ (ಡ್ರೖೆವರ್ಲೆಸ್) ಫಾಮುಲಾ ರೇಸಿಂಗ್ ಕಾರು 6 ಪ್ರಶಸ್ತಿಗಳೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ. ಇದರಲ್ಲಿ ಹುಬ್ಬಳ್ಳಿ ಹುಡುಗಿಯ ವಿಶೇಷ ಪಾತ್ರ ಇರುವುದು ಗಮನಾರ್ಹವಾಗಿದೆ.
p>ಚಾಲಕ ರಹಿತ ಫಾಮುಲಾ ರೇಸಿಂಗ್ ಕಾರ್ ಅಭಿವೃದ್ಧಿ ಪಡಿಸಿದ ಐಐಟಿ ಬಾಂಬೆಯಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿರುವ 40 ವಿದ್ಯಾರ್ಥಿಗಳ ತಂಡದಲ್ಲಿ ಹುಬ್ಬಳ್ಳಿಯ ಸಿಂಚನಾ ಎಚ್. ಪಾಟೀಲ ಒಬ್ಬಳು. ಇವಳು ಕಾರಿನ ಸ್ಟೀರಿಂಗ್, ಸಸ್ಪೆನ್ಷನ್ ಹಾಗೂ ಬ್ರೇಕ್ ವ್ಯವಸ್ಥೆಯ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದು ವಿಶೇಷ.
ಡ್ರೖೆವರ್ಲೆಸ್ ರೇಸಿಂಗ್ನಲ್ಲಿ ಪ್ರಥಮ, ಇಲೆಕ್ಟ್ರಿಕ್ (ಇವಿ) ವಿಭಾಗದಲ್ಲಿ ಪ್ರಥಮ, ಇಂಜಿನಿಯರಿಂಗ್ ವಿನ್ಯಾಸದಲ್ಲಿ ಪ್ರಥಮ, ದಕ್ಷತೆ ಯಲ್ಲಿ ಪ್ರಥಮ, ವೆಚ್ಚ ಮತ್ತು ಉತ್ಪಾದನೆಯಲ್ಲಿ ದ್ವಿತೀಯ ಹಾಗೂ ವ್ಯವಹಾರ ಯೋಜನೆಯಲ್ಲಿ ಐಐಟಿ ಬಾಂಬೆ ತಂಡ ನಾಲ್ಕನೇ ಸ್ಥಾನ ಪಡೆದು 6 ಪ್ರಶಸ್ತಿಗಳನ್ನು ಬಾಜಿಕೊಂಡಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ತಂಡವು ಕಾರನ್ನು ಭಾರತದಿಂದ ಪೋರ್ಚುಗಲ್ಗೆ ಸಾಗಿಸಿ, ನಿಗದಿತ ಸಮಯದಲ್ಲಿ ಮತ್ತೆ ಜೋಡಿಸಿ ಟ್ರ್ಯಾಕ್ನಲ್ಲಿ ಯಶಸ್ವಿಯಾಗಿ ಓಡಿಸಿತು. ಕಾರಿನ ಬಹುತೇಕ ಎಲ್ಲ ಬಿಡಿ ಭಾಗಗಳ ವಿನ್ಯಾಸ ಮತ್ತು ನಿರ್ವಣವನ್ನು ಐಐಟಿ ಬಾಂಬೆ ಆವರಣದಲ್ಲೇ ನಡೆಸಲಾಗಿದೆ. ಈ ಸ್ಪರ್ಧೆಯಲ್ಲಿ ಡ್ರೖೆವರ್ಲೆಸ್ ವಿಭಾಗದಲ್ಲಿ ಭಾಗವಹಿಸಿದ ಭಾರತದ ಮೊದಲ ಹಾಗೂ ಏಕೈಕ ಫಾಮುಲಾ ಸ್ಟೂಡೆಂಟ್ ತಂಡ ಎಂಬ ಹೆಗ್ಗಳಿಕೆಯನ್ನು ಸಹ ತಂಡ ಪಡೆದುಕೊಂಡಿದೆ.
ಈ ರೇಸಿಂಗ್ ಕಾರನ್ನು ಕೇವಲ ಸಾಫ್ಟ್ವೇರ್ ಬದಲಿಸುವ ಮೂಲಕ ಡ್ರೖೆವರ್ಲೆಸ್ ಮತ್ತು ಮ್ಯಾನುಯಲ್ (ಮಾನವ ಸಹಿತ) ಎರಡೂ ಮೋಡ್ಗಳಲ್ಲಿ ಚಲಾಯಿಸಬಹುದು ಎಂದು ಐಐಟಿ ಬಾಂಬೆ ತಂಡ ತಿಳಿಸಿದೆ
ಬಿ.ಟೆಕ್ನ 40 ವಿದ್ಯಾರ್ಥಿಗಳ ತಂಡದಲ್ಲಿ 11 ಜನ ವಿದ್ಯಾರ್ಥಿನಿಯರು ಇದ್ದರು. ಪೋರ್ಚುಗಲ್ನ ಕ್ಯಾಸ್ಟೆಲೋ ಬ್ರಾಂಕೋ ಮೋಟರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಜುಲೈ 19ರಿಂದ 24ರವರೆಗೆ ಸ್ಪರ್ಧೆ ನಡೆಯಿತು.