ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ ಖಾಸಗಿ ಬಸ್ ಚಾಲಕ.
- ಹೃದಯ ಸ್ತಂಭನಕ್ಕೊಳಗಾಗಿ ಅಸ್ವಸ್ಥಗೊಂಡಿದ್ದ ಮಹಿಳೆ
- ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ ಚಾಲಕ
ಧಾರವಾಡ: ಹೃದಯ ಸ್ತಂಭನಕ್ಕೊಳಗಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಖಾಸಗಿ ಬಸ್ ಚಾಲಕ& ನಿರ್ವಾಹಕರು ಬಸ್ ಸಮೇತ ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ ಟನೆ ನಗರದಲ್ಲಿ ಸೋಮವಾರ ನಡೆದಿದೆ.
ಸತ್ತೂರಿನ ಡೆಂಟಲ್ ಕಾಲೇಜು ಸ್ಟಾಪ್ನಿಂದ ಮಹಿಳೆಯೊಬ್ಬರು ಖಾಸಗಿ ಬಸ್ ಹತ್ತಿದ್ದರು. ಕೆಲ ಹೊತ್ತಿನಲ್ಲಿ ಮಹಿಳೆಗೆ ಬಸ್ನಲ್ಲಿ ಹೃದಯ ಸ್ತಂಭನವಾಗಿದೆ. ವಿಷಯ ಗೊತ್ತಾದ ಖಾಸಗಿ ಬಸ್ ಚಾಲಕ ಶಂಕರ ಪಾಟೀಲ ಹಾಗೂ ನಿರ್ವಾಹಕ ಮಂಜು, ಬಸ್ನ್ನು ನೇರವಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಇದಕ್ಕೆ ಬಸ್ನಲ್ಲಿದ್ದ ಪ್ರಯಾಣಿಕರು ನೆರವು ನೀಡಿದ್ದಾರೆ.
ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕನ ಮಾನವೀಯತೆಗೆ ಪ್ರಶಂಶೆ ವ್ಯಕ್ತವಾಗಿದೆ.