drama theter ಹುಬ್ಬಳ್ಳಿಯ ಉಣಕಲ್ಲ ಅಂಬಿಕಾನಗರದಲ್ಲಿ ರಂಗಮಂದಿರವನ್ನು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಇತರರು ಇದ್ದರು. 
ಧಾರವಾಡ

drama theter ನಾಗರಿಕ ಸೌಲಭ್ಯ ಒದಗಿಸುವುದು ಪ್ರತಿನಿಧಿಗಳ ಕರ್ತವ್ಯ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ
  • ಅಂಬಿಕಾನಗರ ಉದ್ಯಾನದಲ್ಲಿ ನೂತನ ರಂಗಮಂದಿರ ಉದ್ಘಾಟನೆ

ಹುಬ್ಬಳ್ಳಿ: drama theter ಚುನಾವಣೆಗಳಲ್ಲಿ ಆಯ್ಕೆಯಾದ ಪಾಲಿಕೆ ಸದಸ್ಯರಾಗಲಿ, ಶಾಸಕರಾಗಲಿ, ಸಂಸದರಾಗಲಿ ಸಮಾಜದೇಳಿಗೆಗಾಗಿ ಅಭಿವೃದ್ಧಿ ಹಾಗೂ ನಾಗರಿಕ ಸೌಲಭ್ಯಗಳಿಗಾಗಿ ನಿರಂತರ ಕೆಲಸ ಮಾಡಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ತಾಲೂಕಿನ ಉಣಕಲ್ಲ ಅಂಬಿಕಾನಗರ ಉದ್ಯಾನದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ನೂತನ ರಂಗಮಂದಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಅವರು ಈ ಭಾಗದಲ್ಲಿ ಸಾಕಷ್ಟು ನಾಗರಿಕ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಹೊಸದಾಗಿ ರಸ್ತೆ, ಒಳಚರಂಡಿ ನಿರ್ಮಾಣ, ಈ ಭಾಗದ ಆರು ಕೆರೆಗಳ ಅಭಿವೃದ್ಧಿ, ಸೌಂದರ್ಯೀಕರಣಕ್ಕೆ ಕ್ರಮ ಕೈಗೊಂಡಿರುವುದು ಸಂತಸದ ಸಂಗತಿ ಎಂದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ತಮ್ಮ ವಾರ್ಡಿನಲ್ಲಿ ಸುಮಾರು ಹತ್ತು ಸಮುದಾಯ ಭವನ, ರಂಗಮಂದಿರ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರಸ್ತೆ ನಿರ್ಮಾಣ, ಒಳಚರಂಡಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಉಣಕಲ್ಲನಲ್ಲಿ ಕುಸ್ತಿ ಪಟುಗಳು ಹೆಚ್ಚಿದ್ದು ಅವರಿಗಾಗಿ ಸಕಲ ಸೌಕರ್ಯವುಳ್ಳ "ಕುಸ್ತಿ ಮನೆ' ನಿರ್ಮಿಸಲು ಸಹಾಯ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

ಪಾಲಿಕೆಯ ಇಂಜಿನಿಯರ್​ ರಾಠೋಡ ಹಾಗೂ ಗುತ್ತಿಗೆದಾರ ಆರ್​.ಎಂ. ದೊಡ್ಡಮನಿ ಅವರಿಗೆ ಸತ್ಕರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಎಫ್.ಡಿ. ಬಡ್ಡಿ ಮಾತನಾಡಿದರು.

ವಿಭಾ ಅರಟಾಳ ಪ್ರಾರ್ಥಿಸಿದರು. ಬಸವರಾಜ ಪಾವಟೆ ವಂದಿಸಿದರು.