drama play ಹುಬ್ಬಳ್ಳಿಯ ಫರ್ಟಿಲಿಟಿ ಸೆಂಟರ್ನಲ್ಲಿ ಲೇಖಕ ಸೋಮು ರೆಡ್ಡಿ ಅವರ ರಚನೆಯ ಆಶಾಕಿರಣ ನಾಟಕ ಪ್ರದರ್ಶನ ನೀಡಿದ ಕಲಾವಿದರನ್ನು ಅಭಿನಂದಿಸಲಾಯಿತು.
ಹುಬ್ಬಳ್ಳಿ: drama play ನಗರದ ಗೋಕುಲ ರಸ್ತೆಯಲ್ಲಿರುವ ನೋವಾ ಐವಿಎಫ್ ಫರ್ಟಿಲಿಟಿ ಸೆಂಟರ್ ಬಯಲು ರಂಗಸಜ್ಜಿಕೆಯಲ್ಲಿ ಲೇಖಕ ಸೋಮು ರೆಡ್ಡಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಸಾಮಾಜಿಕ ತುಡಿತದ "ಆಶಾಕಿರಣ' ನಾಟಕವು ನೋಡುಗರ ಗಮನ ಸೆಳೆಯಿತು.
ಜುಲೈ 25, ವರ್ಲ್ಡ್ ಐವಿಎಫ್ ದಿನದ ಪ್ರಯುಕ್ತ ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. 25 ನಿಮಿಷದ ಈ ನಾಟಕವು ಸಂಪೂರ್ಣವಾಗಿ ಐವಿಎಫ್ ಬಗೆಗೆ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವ ಕಥೆ ಹೊಂದಿದೆ. ಬಂಜೆತನವೂ ಸಹ ವೈದ್ಯಕಿಯ ಸ್ಥಿತಿಯೇ ಹೊರತು ಅದು ವ್ಯಕ್ತಿಯ ವೈಯಕ್ತಿಕ ನೂನ್ಯತೆಯಲ್ಲ ಎಂಬುದನ್ನು ನಾಟಕ ತಿಳಿಸಿಕೊಡುತ್ತದೆ.
ನಿರ್ದೇಶಕ ಸೋಮು ರೆಡ್ಡಿ ಅವರ ಕಲ್ಪನಾ ಶಕ್ತಿಯಿಂದ ರಚನೆಯಾದ ಈ ಕಥೆಯು, ಪ್ರೇಕ್ಷಕನನ್ನು ಆಳವಾಗಿ ಆಲೋಚನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು.
ಐವಿಎಫ್ ಫರ್ಟಿಲಿಟಿ ಸೆಂಟರ್ ಸಹಯೋಗದಲ್ಲಿ ಏರ್ಪಡಿಸಿದ್ದ ನಾಟಕದಲ್ಲಿ ಅಶ್ವಘೋಷ ಎ ಟ್ರಸ್ಟ್ ಆಫ್ ಥಿಯೇಟರ್ ಧಾರವಾಡ ಘಟಕದ ಕಲಾವಿದರಾದ ಜಗದೀಶ ಮೂಕಿ, ಬಸವರಾಜ ದೊಡ್ಡಮನಿ, ರಾಧಿಕಾ ಶಿಗ್ಗಾಂವಿ, ಮಲ್ಲಿಕಾ ಮತ್ತು ವಿನಾಯಕ ಹುಬ್ಬಳ್ಳಿ ಅವರು ಅಭಿನಯಿಸಿದರು.
ಶ್ರೀಕಾಂತ ಕುಲಕರ್ಣಿ ಪ್ರಸಾದನ, ಷಣ್ಮುಖ ಮತ್ತು ರವಿ ಅವರ ಸಂಗೀತ ಅಚ್ಚುಕಟ್ಟಾಗಿತ್ತು.