drama ಕಲಾ ವೃಂದದ ಅಧ್ಯಕ್ಷ ಅನಿಲಕುಮಾರ ಕವಿಶೆಟ್ಟಿ ಮಾತನಾಡಿದರು. 
ಧಾರವಾಡ

drama ಬೇಲಿ ಮತ್ತು ಹೊಲ ನಾಟಕ ಪ್ರದರ್ಶನ

ಹುಬ್ಬಳ್ಳಿ: drama ಇಲ್ಲಿಯ ಪ್ರಗತಿ ಕಲಾ ವೃಂದದ ವತಿಯಿಂದ ಜನಪ್ರಿಯ ನಾಟಕ ಬೇಲಿ ಮತ್ತು ಹೊಲ ಇದರ ಉಚಿತ ಪ್ರದರ್ಶನವನ್ನು ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಜ. 31ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಕಲಾ ವೃಂದದ ಅಧ್ಯಕ್ಷ ಅನಿಲಕುಮಾರ ಕವಿಶೆಟ್ಟಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂ. ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ನಾಟಕಕ್ಕೆ ದಿ. ಜಿ.ಎಚ್​. ರಾವೇಂದ್ರ ಅವರು ರಂಗರೂಪ ನೀಡಿದ್ದಾರೆ ಎಂದರು.
ಸಂಜೆ 5.30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಡಿಸಿಪಿ ಸಿ.ಆರ್​. ರವೀಶ, ಸಾಹಿತಿ ಕುಂ. ವೀರಭದ್ರಪ್ಪ, ಕೆಎಂಸಿಆರ್​ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಮಂಜುನಾಥ ನೇಕಾರ, ಡಾ. ಎಂ.ಜಿ. ಹಿರೇಮಠ, ಮಂಜುನಾಥ ಮುನವಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಾಜಿ ಎಂಎಲ್​ಸಿ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸುವರು.
ಹವ್ಯಾಸಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು. ಕಲಾವೃಂದದಿಂದ ಪ್ರತಿ ವರ್ಷ ಅನೇಕ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಹವ್ಯಾಸಿ ಕಲಾ ತಂಡವಾಗಿರುವುದರಿಂದ ಖರ್ಚು ವೆಚ್ಚಗಳನ್ನು ಸ್ವತಃ ಮಾಡಿಕೊಂಡು ಬರುತ್ತಿದ್ದೇವೆ ಎಂದು ಕವಿಶೆಟ್ಟಿ ಹೇಳಿದರು.