drama ವರಕವಿ ಡಾ. ದ.ರಾ. ಬೇಂದ್ರೆ  
ಧಾರವಾಡ

‘ಸಾಯೋ ಆಟ’ ನಾಟಕ ಪ್ರದರ್ಶನ ಆ. 2ಕ್ಕೆ drama

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಪ್ರದರ್ಶನ ಉಚಿತವಿದ್ದು, ರಂಗ ಪ್ರಿಯರು ಪಾಲ್ಗೊಳ್ಳುವಂತೆ ಕೋರಲಾಗಿದೆ.
  • ಈ ನಾಟಕ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.
  • ರಂಗ ರೇಖಾ ಕಲಾ ಬಳಗಹಾಗೂ ಡಾ. ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆ ಸಹೋಯೋಗದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ.
ಹುಬ್ಬಳ್ಳಿ :
ರಂಗ ರೇಖಾ ಕಲಾ ಬಳಗಹಾಗೂ ಡಾ. ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆ ಸಹೋಯೋಗದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ವರಕವಿ ಡಾ. ದ.ರಾ. ಬೇಂದ್ರೆಯವರ ಈ ನಾಟಕ ಪ್ರದರ್ಶನಗೊಂಡು 2026ನೇ ವರ್ಷಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.
ಡಾ. ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಕ ಮಧುಕರ ಎಕ್ಕುಂಡಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸುಬಾಸ ಮೇಹರವಾಡೆ ನಿರ್ದೇಶನದ ಈ ನಾಟಕಕ್ಕೆ ಸಂಗೀತವನ್ನು ಮಂಜುನಾಥ ಇಂಗಳಳ್ಳಿ ನೀಡಿದ್ದು, ಹಿನ್ನೆಲೆ ಗಾಯನವನ್ನು ತುಕಾರಾಮ ಕಟಾರೆ ಒದಗಿಸಿದ್ದಾರೆ. ಪ್ರಸಾಧನವನ್ನು ಹರೀಶ ಧುಳೆ ನೆರವೇರಿಸಲಿದ್ದಾರೆ.
ರಂಗದ ಮೇಲೆ ಸಂತೋಷ ಮಠದ, ಸಂಜಯ ನಡುವಿನಮನಿ, ಗೌರಿ ಜಕರಡ್ಡಿ, ಶಕುಂತಲಾ ಬೀರಣ್ಣವರ, ಫಕ್ಕೀರೇಶ ಮುಗುಳಿ, ಪ್ರಜ್ವಲ ಅನವಾಲ, ಶಿವಾನಂದ ದಾಸಪ್ಪನವರ, ಬಸವರಾಜ ಸಜ್ಜನ, ಬದರಿ ನಾರಾಯಣ ಕೊರಲಳ್ಳಿ, ಲಕ್ಷ್ಮಣ ಸುಣಗಾರ, ಶಿವಣ್ಣ ಪೆರೂರ ಹಾಗೂ ಇನ್ನಿತರರು ಅಭಿನಯಿಸಲಿದ್ದಾರೆ.
ಪ್ರದರ್ಶನ ಉಚಿತವಿದ್ದು, ರಂಗ ಪ್ರಿಯರು ಪಾಲ್ಗೊಳ್ಳುವಂತೆ ಕೋರಲಾಗಿದೆ.