ಹುಬ್ಬಳ್ಳಿಯ ಪದವಿ ಪೂರ್ವ ಕಾಲೇಜ್‌ನಲ್ಲಿ ಇತ್ತೀಚೆಗೆ ‘ಮಾರ್ಡನ್ ಫ್ಯಾಮಿಲಿ’ ಎಂಬ ನಾಟಕ (drama) ಪ್ರದರ್ಶಿಸಲಾಯಿತು.  
ಧಾರವಾಡ

(drama) ನಾಟಕ ಪ್ರದರ್ಶನದಿಂದ ರಂಗಾಸಕ್ತಿ

ಹುಬ್ಬಳ್ಳಿ: ಇಲ್ಲಿಯ ಆನಂದ ನಗರದ ಪದವಿ ಪೂರ್ವ ಕಾಲೇಜ್‌ನಲ್ಲಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಅಭಿನಯ (drama) ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗೆ ‘ಮಾರ್ಡನ್ ಫ್ಯಾಮಿಲಿ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಇಂಥ ನಾಟಕಗಳ ಪ್ರದರ್ಶನದಿಂದ ಮಕ್ಕಳಲ್ಲಿ ರಂಗಾಸಕ್ರಿ ಮೂಡುತ್ತದೆ. ರಂಗ ಪರಂಪರೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಇಂಥ ನಾಟಕಗಳ ಪ್ರದರ್ಶನಗಳನ್ನು ನಿರಂತರವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.
ಜಾನಪದ ವಿವಿಯ ಪ್ರಾಧ್ಯಾಪಕ ಡಾ.ಎಚ್.ಎಚ್. ನದಾಫ್ ಮಾತನಾಡಿ, ರಂಗ ಪರಂಪರೆ ಉಳಿಯಲು ನಿರಂತರವಾಗಿ ಪ್ರಯೋಗಗಳು ನಡೆಯುತ್ತಿರಬೇಕು ಎಂದರು.
ಪ್ರಾಚಾರ್ಯೆ ಛಾಯಾ ಖನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ರಂಗ ಕಲಾವಿದ ಪ್ರಕಾಶ ಧೂಳೆ ನಾಟಕದ ಮಾತುಗಳನ್ನು ಹೇಳಿ ರಂಜಿಸಿದರು.
ಸುನಿಧಿ ಕಲಾ ಸೌರಭ ಸಂಸ್ಥಾಪಕ ಸುಭಾಷ ನರೇಂದ್ರ ನಾಟಕ ರಚಿಸಿ ನಿರ್ದೇಶಿಸಿದರು. ಕಲಾವಿದೆ ವೀಣಾ ಅಠವಾಲೆ ತರಬೇತಿ ನೀಡಿದರು.
ಭೂಮಿಕಾ, ವಿಜಯಲಕ್ಷ್ಮೀ ಅನಿಸಿಕೆ ಹಂಚಿಕೊಂಡರು.