Award ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಲಿನಿಕ್​ನ ಸಂಸ್ಥಾಪಕ ಡಾ. ಸುನೀಲ ಕರಿ. 
ಧಾರವಾಡ

ಅಮೆರಿಕೆ ಅವಾರ್ಡ್​ಗೆ ಡಾ. ಶಶಾಂಕ ಕರಿ ಭಾಜನ Award

ಪ್ರಮುಖ ಮುಖ್ಯಾಂಶಗಳು

  • ರಕ್ತನಾಳ ಶಸ್ತ್ರಚಿಕಿತ್ಸಕ ಪರಿಣಿತರಾಗಿದ್ದಾರೆ.
  • ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಹೆಚ್ಚಿನ ಅಧ್ಯಯನ ನಡೆಸಲಿದ್ದಾರೆ
  • ರಾಜ್ಯದ ವಿವಿಧೆಡೆ ಪರಿಚಿತರಾಗಿದ್ದಾರೆ
ಹುಬ್ಬಳ್ಳಿ :
Award
ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್​ನ ವ್ಯಾಸ್ಕುಲರ್ ಮತ್ತು ಎಂಡೋವ್ಯಾಸ್ಕಲರ್ ಸರ್ಜನ್ ಡಾ. ಶಶಾಂಕ ಕರಿ ಅವರು ಅಮೆರಿಕೆಯ ಸೊಸೈಟಿ ಆಫ್ ವ್ಯಾಸ್ಕುಲರ್ ಸರ್ಜರಿ (ಎಸ್​ವಿಎಸ್) ಅಂತಾರಾಷ್ಟ್ರೀಯ ರಿಲೇಷನ್ಸ್ ಕಮೀಟಿಯಿಂದ ಕೊಡಮಾಡುವ ಎಸ್​ವಿಎಸ್ ಅಂತಾರಾಷ್ಟ್ರೀಯ ಸ್ಕಾಲರ್ ಪ್ರೋಗ್ರಾಮ್ ಅವಾರ್ಡ್-2026ಗೆ ಭಾಜನರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಿನಿಕ್​ನ ಸಂಸ್ಥಾಪಕ ಡಾ. ಸುನೀಲ ಕರಿ, ಇಡೀ ವಿಶ್ವದಲ್ಲಿ ಕೇವಲ ನಾಲ್ಕು ಜನ ವ್ಯಾಸ್ಕುಲರ್ ಸರ್ಜನ್​ಗಳನ್ನು ಮಾತ್ರ ಈ ಅವಾರ್ಡ್​ಗೆ ಆಯ್ಕೆ ಮಾಡಲಾಗುತ್ತದೆ. ಡಾ. ಶಶಾಂಕ ಕರಿ ಅವರು ಆಯ್ಕೆಯಾಗಿರುವುದು ಅವರ ಪರಿಣಿತಿಗೆ, ಸೇವೆಗೆ ಒದಗಿದ ವಿಶೇಷ ಗರಿಯಾಗಿದೆ ಎಂದರು.
ಬೆಂಗಳೂರಿನಲ್ಲಿ 3 ವರ್ಷ, ಹುಬ್ಬಳ್ಳಿಯಲ್ಲಿ 2 ವರ್ಷ ಸೇರಿ ಒಟ್ಟು 5 ವರ್ಷಗಳಿಂದ ರಕ್ತನಾಳ ಸ್ಪೆಷಾಲಿಸ್ಟ್ ಆಗಿ ಸೇವೆ ಮಾಡುತ್ತಿರುವ ಡಾ.ಶಶಾಂಕ ಕರಿ ಅವರು ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗ, ದಾವಣಗೆರೆ ಸೇರಿ ರಾಜ್ಯದ ವಿವಿಧೆಡೆ ಪರಿಚಿತರಾಗಿದ್ದಾರೆ ಎಂದರು.
ಆಂದ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ತಮಿಳುನಾಡು ರೋಗಿಗಳು ಇವರ ಬಳಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದು, ನಿತ್ಯ ನೂರಾರು ಜನ ಆಸ್ಪತ್ರೆಯಲ್ಲಿ ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಶಶಾಂಕ ಕರಿ ಅವರು ರಕ್ತನಾಳ, ಲಿಂಬ್ ಪ್ಯಾಟಿಕ್ಸ್ (ಆನೆಕಾಲು) ಹಾಗೂ ಅಯೋರಿಟಿಕ್ ರಕ್ತನಾಳ, ಕ್ಯಾರೋಟೆಡ್ ರಕ್ತನಾಳ ಶಸ್ತ್ರಚಿಕಿತ್ಸಕ ಪರಿಣಿತರಾಗಿದ್ದಾರೆ.
ಅವರು ಜೂ. 9 ರಿಂದ ಸೆ. 30ವರೆಗೆ ಅಮೆರಿಕೆಯ ಬೋಸ್ಟನ್, ಕ್ಲಿವ್​ಲ್ಯಾಂಡ್ ಹಾಗೂ ನ್ಯೂಯಾರ್ಕ್​ನಲ್ಲಿ ನಡೆಯಲಿರುವ ವಿವಿಧ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಹೆಚ್ಚಿನ ಅಧ್ಯಯನ ನಡೆಸಲಿದ್ದಾರೆ ಎಂದು ಹೇಳಿದರು.
ಡಾ. ಶಶಾಂಕ ಕರಿ ಸುದ್ದಿಗೋಷ್ಠಿಯಲ್ಲಿ ಇದ್ದರು.