ಡಾ. ಸಂಗಪ್ಪ ಗಾಬಿ 
ಧಾರವಾಡ

ಡಾ. ಸಂಗಪ್ಪ ಗಾಬಿ ಮರುನಿಯುಕ್ತಿ

ಮಂಜುನಾಥ ಅಂಗಡಿ
ಧಾರವಾಡ: ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾಗಿ ಡಾ. ಸಂಗಪ್ಪ ಗಾಬಿ ಅವರನ್ನು ಮರುನಿಯುಕ್ತಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ತಿಂಗಳು ಅವರ ಸ್ಥಾನಕ್ಕೆ ಡಾ. ಮಲ್ಲನಗೌಡ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಡಾ. ಗಾಬಿ ಅವರಿಗೆ ಸ್ಥಳ ನಿಯೋಜನೆ ಮಾಡಿರಲಿಲ್ಲ. ಈ ಮಧ್ಯೆ ಡಾ. ಗಾಬಿ ಅವರನ್ನೇ ಶಸ್ತ್ರಚಿಕಿತ್ಸಕ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂ& ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಕೊನೆಗೆ ಅವರನ್ನೇ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಡಾ. ಗಾಬಿ ಜಿಲ್ಲಾ ಆಸ್ಪತ್ರೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.