ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಡಾ. ಎಸ್.ವಿ. ಹಿತ್ತಲಮನಿ ಅವರನ್ನು ಗೌರವಿಸಲಾಯಿತು.
ಧಾರವಾಡ: ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರಿಗೌಡರವರ ದೂರದೃಷ್ಟಿ, ಪರಿಶ್ರಮ ಹಾಗೂ ರೈತಪರ ಸೇವೆಯು ರಾಜ್ಯದಲ್ಲಿ ತೋಟಗಾರಿಕಾ ಕ್ರಾಂತಿಗೆ ಭದ್ರ ಬುನಾದಿ ಹಾಕಿದೆ. ಕರ್ನಾಟಕವನ್ನು ದೇಶದಲ್ಲಿ ಮಾದರಿ ತೋಟಗಾರಿಕೆ ರಾಜ್ಯವನ್ನಾಗಿ ರೂಪಿಸುವಲ್ಲಿ ಅವರ ಕೊಡುಗೆ ಅಪಾರ ಎಂದು ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕ ಡಾ. ಎಸ್.ವಿ. ಹಿತ್ತಲಮನಿ ಹೇಳಿದರು.
ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಕರ್ನಾಟಕ ಸಹಾಯಕ ತೋಟಗಾರಿಕೆ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂ ಬೆಳಗಾವಿ ವಿಭಾಗದಿಂದ ಶನಿವಾರ ಆಯೋಜಿಸಿದ್ದ ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರಿಗೌಡರವರ ಜನ್ಮದಿನದ ಅಂಗವಾಗಿ ತೋಟಗಾರಿಕೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಸಂತೋಷ ಸಪ್ಪಂಡಿ, ಸಂದ ಅಧ್ಯಕ್ಷ ಏಕಾಂತ, ಉಪಾಧ್ಯಕ್ಷ ಶಿವಪ್ರಸಾದ, ಪ್ರಧಾನ ಕಾರ್ಯದಶಿರ್ ಬಸನಗೌಡ, ಖಜಾಂಚಿ ಕಿಶೋರ, ಪದಾಧಿಕಾರಿಗಳಾದ ಕಾಶಿನಾಥ, ಸುನೀಲ, ಚರಣ, ಗುರುರಾಜ, ಸೋನಿ, ಮಹಾಂತೇಶ ಯಮಕನಮರಡಿ, ಯೋಗೇಶ ಹಾಗೂ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಸಹಾಯಕ ತೋಟಗಾರಿಕೆ ಅಧಿಕಾರಿಗಳು ಉಪಸ್ಥಿತರಿಸಿದ್ದರು.