namana ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಬಿ. ನಾಡಗೌಡ.
- ಷಟಸ್ಥಳ ಬ್ರಹ್ಮ ಗುರುಶಾಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
- ಲಿಂಗರಾಜ ನಗರದ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದೆ.
- ಸಮಿತಿ ಅಧ್ಯಕ್ಷ ಎನ್.ಎಂ. ತೋಗರ್ಸಿ ಅಧ್ಯಕ್ಷತೆ ವಹಿಸುವರು.
ಹುಬ್ಬಳ್ಳಿ :
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಬಿ. ನಾಡಗೌಡ, ಹಾವೇರಿ ಜಿಲ್ಲೆ ನೆಗಳೂರಿನ ಸಂಸ್ಥಾನ ಹಿರೇಮಠದ ಷಟಸ್ಥಳ ಬ್ರಹ್ಮ ಗುರುಶಾಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.
ಡಾ. ಜಿ.ಬಿ. ಕಲಕೋಟಿ ನುಡಿ ನಮನ ಸಮಿತಿ ಅಧ್ಯಕ್ಷ ಎನ್.ಎಂ. ತೋಗರ್ಸಿ ಅಧ್ಯಕ್ಷತೆ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭೆ ಸದಸ್ಯ ಪ್ರೊ. ಮಾ. ನಾಗರಾಜ, ಶಾಸಕ ಎಚ್.ಕೆ. ಪಾಟೀಲ, ಎಂಎಲ್ಸಿ ಎಸ್.ವಿ. ಸಂಕನೂರ, ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೆಎಲ್ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಡಾ. ಜಿ.ಬಿ. ಕಲಕೋಟಿ ಅವರ ಸ್ನೇಹಿತರು, ಸಹೋದ್ಯೋಗಿಗಳು, ಬಂಧುಗಳು, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದರು.
ಡಾ. ಎಂ.ಐ. ಸಾಂಬ್ರಾಣಿ, ಡಾ. ಎಂ.ಟಿ. ಹೊಸಮನಿ, ಡಾ. ಎಂ.ಎಸ್. ಯಾರಗೊಪ್ಪ, ಡಾ. ಬಿ.ಎಸ್. ಮಾಳವಾಡ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.