doctors society ಹುಬ್ಬಳ್ಳಿಯ ಸನಾ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಷನ್ಸ್​ ವತಿಯಿಂದ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮೊಹಮ್ಮದ ಹುಸೇನ್​ ಮಳಗಿ, ಡಾ. ಕೆ.ಎಫ್​. ಕಮ್ಮಾರ, ಅಶ್ರಅಲಿ ಬಶೀರ್​ ಅಹ್ಮದ, ಮೊಹಮ್ಮದ ಅಯೂಬ ಸವಣೂರ ಇತರರು ಇದ್ದರು. 
ಧಾರವಾಡ

doctors society ವೈದ್ಯ ವೃತ್ತಿಯು ಮಾನವತೆಯ ಶ್ರೇಷ್ಠ ಸೇವೆ

ಪ್ರಮುಖ ಮುಖ್ಯಾಂಶಗಳು

  • ಸನಾ ಸಂಸ್ಥೆಯಲ್ಲಿ ವೈದ್ಯರಿಗೆ ಸನ್ಮಾನ
  • ಕೆಎಂಸಿಆರ್​ಐ ನಿರ್ದೇಶಕ ಡಾ. ಕೆ.ಎಫ್​. ಕಮ್ಮಾರ ಅಭಿಮತ
ಹುಬ್ಬಳ್ಳಿ: doctors society ಇಲ್ಲಿಯ ಭೈರಿದೇವರಕೊಪ್ಪ ಶಾಂತಿನಿಕೇತನ ಕ್ಯಾಂಪಸ್​ನಲ್ಲಿ ಸನಾ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಷನ್ಸ್​ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು. ಹೊಸ ಫಿಸಿಯೋಥೆರಪಿ ಹೊರರೋಗಿ ವಿಭಾಗ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆಎಂಸಿಆರ್​ಐ ನಿರ್ದೇಶಕ ಡಾ. ಕೆ.ಎಫ್​. ಕಮ್ಮಾರ ಮಾತನಾಡಿ, ವೈದ್ಯಕಿಯ ವೃತ್ತಿಯು ಮಾನವತೆಗೆ ಸಲ್ಲಿಸುವ ಅತ್ಯಂತ ಶ್ರೇಷ್ಠ ಸೇವೆಗಳಲ್ಲಿ ಒಂದು. ವೈದ್ಯರನ್ನು ಗೌರವಿಸುವುದು ಮತ್ತು ಗುಣಮಟ್ಟದ ಆರೋಗ್ಯ ಶಿಕ್ಷಣವನ್ನು ಉತ್ತೇಜಿಸುವುದಕ್ಕಾಗಿ ಸನಾ ಗ್ರೂಪ್​ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ವಿದ್ಯಾರ್ಥಿಗಳಿಗೆ ನೈತಿಕತೆ, ಕರುಣೆ ಮತ್ತು ವೃತ್ತಿಪರ ಶ್ರೇಷ್ಠತೆಯನ್ನು ಪಾಲಿಸುವುದರ ಮಹತ್ವವನ್ನು ವಿವರಿಸಿದರು.
ಟ್ರಸ್ಟಿ ಅಶ್ರಫ್​ ಅಲಿ ಬಶೀರ್​ ಅಹ್ಮದ್​ ಮಾತನಾಡಿ, ಸಂಸ್ಥೆಯು ಆರೋಗ್ಯ ಶಿಕ್ಷಣವನ್ನು ಬಲಪಡಿಸುವುದು ಮತ್ತು ಸಮುದಾಯಕ್ಕಾಗಿ ಗುಣಮಟ್ಟದ ವೈದ್ಯಕಿಯ ಸೇವೆಗಳನ್ನು ವಿಸ್ತರಿಸುವುದಕ್ಕೆ ಬದ್ಧವಾಗಿದೆ ಎಂದರು.
ಆರೋಗ್ಯ ಸೇವೆ ಮತ್ತು ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಪರಿಗಣಿಸಿ ಹುಬ್ಬಳ್ಳಿ-ಧಾರವಾಡದ 22 ಗಣ್ಯ ವೈದ್ಯರನ್ನು ಸನ್ಮಾನಿಸಲಾಯಿತು.