doctors day ಧಾರವಾಡದ ಮಹಾಗಣಪತಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ದಿನ ಆಚರಿಸಲಾಯಿತು. ಡಾ. ಅಶೋಕ ಬಂಗಾರಶೆಟ್ಟರ, ಡಾ. ಎಸ್.ವಿ. ತೆಗ್ಗಿ, ಡಾ. ವೀರೇಶ ಹಿರೇಮಠ, ಡಾ. ಮೋಹನ ನುಚ್ಚಿ ಇತರರು ಇದ್ದರು.
ಹುಬ್ಬಳ್ಳಿ: doctors day ಧಾರವಾಡ ಹೊಯ್ಸಳ ನಗರದ ಶ್ರೀ ಗುರು ಶಿಕ್ಷಣ ಸಂಸ್ಥೆಯ ಮಹಾ ಗಣಪತಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ದಿನ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಾ. ಅಶೋಕ ಬಂಗಾರಶೆಟ್ಟರ ಅವರು, ವೈದ್ಯರ ವೃತ್ತಿಪರತೆ ಹಾಗೂ ಕರ್ತವ್ಯಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ. ಎಸ್.ವಿ. ತೆಗ್ಗಿ, ಸಮಾಜದಲ್ಲಿ ವೈದ್ಯರ ಪಾತ್ರ ಬಹಳ ಮುಖ್ಯವಾದುದು, ಸರಳತೆ ಹಾಗೂ ಕಾಳಜಿಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಿ ಒಳ್ಳೆಯ ವೈದ್ಯರಾಗಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಟ್ರಸ್ಟ್ ನಿರ್ದೇಶಕ ಡಾ. ವೀರೇಶ ಹಿರೇಮಠ, ಹಿರಿಯ ಪ್ರಾಧ್ಯಾಪಕ ಡಾ. ಮೋಹನ ನುಚ್ಚಿ, ಪ್ರಾಧ್ಯಾಪಕಿ ಡಾ. ಲಕ್ಷ್ಮಿ ಪಟ್ಟಣ ಅವರು ಮಾತನಾಡಿದರು.
ಸಿದ್ಧರಾಮೇಶ ತಾರಿವಾಳ ಅವರು ಟ್ರಸ್ಟ್ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.