ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವೆದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಅಶೋಕ ನಾಯ್ಕ್, ಡಾ ಆಶಾ ನೆರವಿ, ಡಾ. ರವಿರಾಜ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಧಾರವಾಡ: ರೋಗಿಗಳು ನೀಡುವ ಹಾರೈಕೆ ಮತ್ತು ಆಶೀರ್ವಾದವೇ ವೈದ್ಯರಿಗೆ ಅತ್ಯುತ್ತಮ ಗೌರವವಾಗಿದೆ ಎಂದು ಎಸ್ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ್ ಹೇಳಿದರು.
ನಗರದ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇವೇಳೆ ಎಸ್.ಡಿ.ಎಂ. ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2 ದಶಕಗಳಿಂದ ವೈದ್ಯಕಿಯ ಶಿಣಕ್ಕೆ ಕೊಡುಗೆ ನೀಡಿದ ಹಿರಿಯ ಕಿವಿ, ಮೂಗು, ಗಂಟಲು ಚಿಕಿತ್ಸಕ ಡಾ. ಅಶೋಕ ನಾಯ್ಕ್, ಹಿರಿಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ ಆಶಾ ನೆರವಿ, ನುರಿತ ಎಲಬು ಮತ್ತು ಕೀಲು ಚಿಕಿತ್ಸಕ ಡಾ. ರವಿರಾಜ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿ ಜೀವಂಧರ್ ಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಉಪ ವೆದ್ಯಕಿಯ ನಿರ್ದೇಶಕ ಸಾಕೇತ ಶೆಟ್ಟಿ, ಉಪ ಕುಲಸಚಿವ ಡಾ. ಅಜಂತಾ ಜಿ.ಎಸ್., ಎಸ್.ಡಿ.ಎಂ ವೆದ್ಯಕಿಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಜಯ್ ಮತ್ತು ಸಂಸ್ಥೆಯ ಮುಖ್ಯಸ್ಥರು, ವಿದ್ಯಾಥಿರ್ಗಳು ಇದ್ದರು.
ಆಸ್ಪತ್ರೆಯ ವೆದ್ಯಕಿಯ ಅಧೀಕ ಡಾ. ಕಿರಣ ಹೆಗ್ಡೆ ಸ್ವಾಗತಿಸಿದರು. ಡಾ. ರುನಾಥ ಶಾನಭಾಗ, ಡಾ. ಸುನಿಲಕುಮಾರ ಮತ್ತು ಡಾ. ಸಂತೋಷ ಜೀವಣ್ಣವರ ಪರಿಚಯಿಸಿದರು. ಡಾ. ಕಾವ್ಯಾಶ್ರೀ ನಿರೂಪಿಸಿದರು. ಪ್ರಾಧ್ಯಾಪಕ ಡಾ. ಪ್ರೀತಂ ಪಾಟೀಲ ವಂದಿಸಿದರು.