ಹುಬ್ಬಳ್ಳಿಯಲ್ಲಿ ನಡೆದ ವಿಭಾಗೀಯ ರೈಲ್ವೆ (Railway) ಬಳಕೆದಾರರ ಸಭೆಯಲ್ಲಿ ಡಿಆರ್ಎಂ ಬೇಲಾ ಮೀನಾ, ಡಾ. ಕಾರ್ತಿಕ ಹೆಗಡೆಕಟ್ಟಿ, ಚಂದ್ರಕಾಂತ ಗವಾಸ್ ಹಾಗೂ ಇತರರಿದ್ದರು.
- ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
- ನಿಲ್ದಾಣದ ಸ್ವಚ್ಛತೆ, ಸುರಕ್ಷತೆ ಕುರಿತು ಅಭಿಯಾನ ನಡೆಸಬೇಕು.
- ಹೆಚ್ಚಿನ ರೈಲು ಸೇವೆ ಒದಗಿಸಿ.
ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಮಾತನಾಡಿ, ಬಳ್ಳಾರಿ ಮತ್ತು ವಾಸ್ಕೊ ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಡಿಸಪ್ಲೇ ಹಾಗೂ ಪ್ರಯಾಣಿಕರಿಗೆ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಮಾದರಿ ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಸುರಕ್ಷತೆ ಹಾಗೂ ಸುವ್ಯವಸ್ಥೆಗೆ ರೈಲ್ವೆ ಇಲಾಖೆ ಸದಾ ಆದ್ಯತೆ ನೀಡುತ್ತದೆ. ಸಮಿತಿ ಸದಸ್ಯರು ರೈಲು ಪ್ರಯಾಣಿಕರ ಕುಂದುಕೊರತೆ ಆಲಿಸುವ ಜತೆಗೆ ರೈಲು ನಿಲ್ದಾಣದ ಸ್ವಚ್ಛತೆ, ಸುರಕ್ಷತೆ ಕುರಿತು ಅಭಿಯಾನ ನಡೆಸಬೇಕು. ವಿಶೇಷವಾಗಿ ಸಂಚರಿಸುವ ರೈಲಿನ ಪ್ರವೇಶ ದ್ವಾರದ ಮೆಟ್ಟಿಲು ಹತ್ತಿರ ಪ್ರಯಾಣಿಸುವರಿಗೆ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಬೇಕು. ಸುರಕ್ಷತೆಯ ಪ್ರಯಾಣದ ಬಗ್ಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ವಿಭಾಗೀಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಮಿತಿ ಕಾರ್ಯದರ್ಶಿ ಡಾ. ಕಾರ್ತಿಕ ಹೆಗಡೆಕಟ್ಟಿ ಮಾತನಾಡಿ, ರೈಲು ನಿಲ್ದಾಣದಲ್ಲಿ ಕಣ್ಗಾವಲಿಗೆ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೆಟಲ್ ಡಿಟೆಕ್ಟರ್, ಡಾಗ್ ಸ್ಕಾಡ್, ಆರ್ಪಿಎಫ್ ಚೆಕ್ಕಿಂಗ್ ಸ್ಪಾಟ್ ಹಾಗೂ ನುರಿತ ರಕ್ಷಣಾ ಸಿಬ್ಬಂದಿ ನಿಲ್ದಾಣಗಳ ಸಂರಕ್ಷಣೆಗೆ ನಿರತರಾಗಿದ್ದಾರೆ ಎಂದು ತಿಳಿಸಿದರು.
ಹಬ್ಬ ಹಾಗೂ ಉತ್ಸವಗಳ ಸಂದರ್ಭದಲ್ಲಿ ಹೆಚ್ಚಿನ ರೈಲು ಸೇವೆ ಒದಗಿಸಿ, ಜನದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ ಎಂದರು.
ಡಿಆರ್ಯುುಸಿಸಿ ಸಮಿತಿ ಸದಸ್ಯರಾದ ಗೋವಾದ ಚಂದ್ರಕಾಂತ ಗವಾಸ್ ಮಾತನಾಡಿದರು. ಕರ್ನಾಟಕ ವಾಣಿಜೊ್ಯೕದ್ಯಮ ಮತ್ತು ಕೈಗಾರಿಕೆ ಸಂಸ್ಥೆ, ನೋಂದಾಯಿತ ಪ್ರಯಾಣಿಕ ಸಂಘಗಳು, ವ್ಯಾಪಾರಿ ಸಂಘಗಳು, ಜನಪ್ರತಿನಿಧಿಗಳಿಂದ ನೇಮಕಗೊಂಡ ಹಾಗೂ ವಿವಿಧ ರಂಗಗಳನ್ನು ಪ್ರತಿನಿಧಿಸುವ ಒಟ್ಟು ಡಿಆರ್ಯುುಸಿಸಿನ 12 ಜನ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.