ಹುಬ್ಬಳ್ಳಿಯಲ್ಲಿ ಕೋರಿಯರ್​ ಬುಕಿಂಗ್​ ಹಾಗೂ ಹಂಚಿಕೆದಾರರ ಸಂಘದ ಅಧ್ಯಕ್ಷ ಶಶಿಕುಮಾರ ಎನ್. ಮಾತನಾಡಿದರು. 
ಧಾರವಾಡ

ಕೋರಿಯರ್​ ಸಂಘದಿಂದ ಕಿಟ್​ ವಿತರಣೆ

ಕಿಟ್​ನಲ್ಲಿ ಅಕ್ಕಿ ಸಕ್ಕರೆ ಬೆಲ್ಲ ಬೇಳೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಕೋರಿಯರ್​ ಬುಕಿಂಗ್​ ಹಾಗೂ ಹಂಚಿಕೆದಾರರ ಸಂಘದ ವತಿಯಿಂದ ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಕೋರಿಯರ್​ ಸಿಬ್ಬಂದಿಗೆ ಆಹಾರ ಧಾನ್ಯ ಕಿಟ್​ ವಿತರಣೆ ಸಮಾರಂಭವನ್ನು ಅ. 25ರಂದು ಬೆಳಗ್ಗೆ 10ಕ್ಕೆ ಹೊಸೂರಿನ ಶಂಕರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಶಿಕುಮಾರ ಎನ್​. ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ರಚನೆಯಾಗಿ ನಾಲ್ಕು ವರ್ಷವಾಗಿದೆ. ಪ್ರತಿ ವರ್ಷ ಅಗತ್ಯ ಇರುವವರಿಗೆ ಕಿಟ್​ ನೀಡುತ್ತ ಬರಲಾಗಿದೆ. ಸಂಘದಲ್ಲಿ ಅಂದಾಜು 350 ಜನರ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 250 ಕಿಟ್​ಗಳನ್ನು ನೀಡುವ ಉದ್ದೇಶವಿದೆ ಎಂದರು.

ಕಿಟ್​ನಲ್ಲಿ ಅಕ್ಕಿ, ಸಕ್ಕರೆ, ಬೆಲ್ಲ, ಬೇಳೆ, ಎಣ್ಣೆ ಸೇರಿ ಸಾವಿರ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ಪ್ಯಾಕ್​ ಮಾಡಲಾಗಿದೆ. ಇದರೊಂದಿಗೆ ಸಿಬ್ಬಂದಿಯ ಹಿತ ರಕ್ಷಣೆಗೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಬಸವನಗೌಡ ಪಾಟೀಲ, ಲಕ್ಷ್ಮಣ ನರಗುಂದ, ಅಬ್ದುಲ್​ ಸಾಧಿಕ್​, ಕಾಂತೇಶ ಮುದೇನೂರ, ಸಿ.ಎಸ್​. ಹಿರೇಮಠ, ಬಸವರಾಜ ಕೆ.ಬಿ, ವಿನಾಯಕ ಜೋಶಿ, ಶಕೀಲ್​ ವಲಿ ಅಹ್ಮದ, ಹಜರತ್​ ಅಲಿ ಲಕ್ಷ್ಮೇಶ್ವರ, ಅನೇಕರು ಪಾಲ್ಗೊಳ್ಳುವರು.