different film ಹುಬ್ಬಳ್ಳಿಯಲ್ಲಿ ಓಡಿ ಹೋಗೋಣ ಬಾ ಚಿತ್ರ ತಂಡದಿಂದ ಮಾಹಿತಿ.
- ಉತ್ತರ ಕರ್ನಾಟಕ ಶೈಲಿಯಲ್ಲಿ ಚಿತ್ರ
- ಮಣ್ಣಿನ ಪೂಜೆಯ ಮಹತ್ವ
ಹುಬ್ಬಳ್ಳಿ: different film ಸಂಪೂರ್ಣ ಉತ್ತರ ಕರ್ನಾಟಕ ಜೀವನಶೈಲಿ ಹಾಗೂ ಭಾಷೆಯಲ್ಲಿ "ಓಡಿ ಹೋಗೋಣ ಬಾ' ಸಿನಿಮಾ ಚಿತ್ರೀಕರಿಸಲಾಗುತ್ತಿದ್ದು, ಹುಬ್ಬಳ್ಳಿ ಮಹಾನಗರದಿಂದಲೇ ಚಿತ್ರೀಕರಣ ಆರಂಭಿಸಲಾಗಿದೆ ಎಂದು ಧಾರವಾಡ ಜಿಲ್ಲೆಯವರಾದ ನಿರ್ದೇಶಕ ರಾಜು ಮೊಕಾಶಿ ತಿಳಿಸಿದರು.
ಚಿತ್ರದ ಟೈಟಲ್ ಹೇಳುವಂತೆ ಇದು ಪ್ರೀತಿ ಪ್ರೇಮದ ಸುತ್ತ ಹೆಣೆದಿರುವ ಕಥೆಯಾದರೂ ಓಡಿ ಹೋಗುವುದರಿಂದ ಆಗುವ ಪರಿಣಾಮ, ಕುಟುಂಬ, ಗ್ರಾಮದಲ್ಲಿ ಎದುರಾಗುವ ಸಮಸ್ಯೆಗಳನ್ನು ತೋರಿಸುವ ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸುವ ಸಂಪ್ರದಾಯ, ಕಲೆ, ಸಂಸತಿಯನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಮೊದಲ ಹಂತದ ಚಿತ್ರೀಕರಣ ನಡೆದಿದೆ. ಡಿಸೆಂಬರ್ ವೇಳೆಗೆ ಚಿತ್ರ ರೆಡಿಯಾಗಲಿದೆ. ಒಂದು ಡಾಬಾ ಸಾಂಗ್ ಇದ್ದು, ಅದನ್ನು ರಾಣೆಬೆನ್ನೂರಿನ ಸೌಮ್ಯಶ್ರೀ ಹಾಡಿದ್ದಾರೆ. ದೈವದ ಆಚರಣೆ ತಿಳಿಸುವ ಕಾಂತಾರ ಸಿನಿಮಾ ನಮಗೆ ಪ್ರೇರಣೆಯಾಗಿದೆ. ಈ ಭಾಗದ ಆಚರಣೆಗಳಾದ ಮಣ್ಣಿನ ಪೂಜೆಯ ಮಹತ್ವ ತಿಳಿಸುವ ಕೆಲಸ ಮಾಡಿದ್ದೇವೆ. ಚಿತ್ರದ ಮೂಲಕ ಮುಂದಿನ ಪೀಳಿಗೆಗೆ ಪರಂಪರೆ ಕೊಂಡೊಯ್ಯುವ ಕೆಲಸವೂ ಆಗಲಿದೆ ಎಂದರು.
ಡಾನ್ಸ್ ಮಾಸ್ಟರ್ ಬಾಲಕೃಷ್ಣ, ಛಾಯಾಗ್ರಾಹಕ ಪವನಕುಮಾರ, ನಟಿಯರಾದ ಅಕ್ಷತಾ, ಅನಿತಾ, ಯಲ್ಲಪ್ಪ ಬದ್ದಿ, ಇದ್ದರು.