ಪ್ರಿಯಾಂಕಾ-ಕಿರಣ್ ದಂಪತಿ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ (ಬಲ)
- ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ವೈದ್ಯ ಕಿರಣ್ ಹೊನ್ನಣ್ಣವರ್
- ಗಂಡನನ್ನು ಬರ್ಬರವಾಗಿ ಇರಿದು ಕೊಂದ ವೈದ್ಯ ಪತ್ನಿ ಪ್ರಿಯಾಂಕಾ
- ಧಾರವಾಡದ ಬಾರಾಕೊಟ್ರಿಯಲ್ಲಿರುವ ರಂಕಾ ಸ್ಟೆಲ್ಲೊ ಅಪಾರ್ಟ್ಮೆಂಟ್ನಲ್ಲಿ ಘಟನೆ
ಧಾರವಾಡ: ಪತ್ನಿಯೇ ತನ್ನ ವೈದ್ಯ ಪತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಮತ್ತು 8 ವರ್ಷದ ಮಗನ ಮೇಲೂ ಹಲ್ಲೆಗೈದ ಭೀಕರ ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಪ್ರಸ್ತುತ, ಖಾಕಿ ಸೂಕ್ತ ಚಿಕಿತ್ಸೆ ಪಡೆಯುತ್ತಿರುವ ಪ್ರಿಯಾಂಕಳನ್ನು ಶೀಘ್ರವೇ ಕಸ್ಟಡಿಗೆ ಪಡೆದು, ಘಟನೆಯ ಇಂಚಿಂಚೂ ಮಾಹಿತಿಯನ್ನು ಕಲೆಹಾಕುವುದಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಡಾ. ಕಿರಣ್ ಎಂಬ ವ್ಯಕ್ಯಿ ಮನೆಯಲ್ಲೇ ಮೃತಪಟ್ಟಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕ ತಕ್ಷಣವೇ ನಾವು ಸ್ಥಳಕ್ಕೆ ಹೋದೆವು. ಆರಂಭದಲ್ಲಿ ಡಬಲ್ ಮರ್ಡರ್ ಅನ್ನೋ ಮಾಹಿತಿ ಬಂತು. ಅವರ ಫ್ಲಾಟ್ಗೆ ಹೋದಾಗ ಕಿರಣ್ ಮೃತಪಟ್ಟಿದ್ದರು. ಅವರ ಮಗ ಇನ್ನೂ ಉಸಿರಾಡುತ್ತಿದ್ದರು. ಮಗುವಿಗೆ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಎಂದರು.
ಮನೆಗೆ ಹೋದ ಸಮಯದಲ್ಲಿ ಪ್ರಿಯಾಂಕಳನ್ನು ಕೊಲೆ ಬಗ್ಗೆ ಕೇಳಿದಾಗ, ಆಕೆ ತಲೆ ಸುತ್ತುತ್ತಿದೆ, ಆಘಾತವಾಗಿದೆ ಅಂದಾಗ ಆಸ್ಪತ್ರೆಗೆ ದಾಖಲಿಸಿದೆವು. ಸ್ವತಃ ತಾನೇ ಇನ್ಸೂಲಿನ್ ಇಂಜೆಕ್ಷನ್ ಮಾಡಿಕೊಂಡಿದ್ದಾಗಿ ಹೇಳಿದ್ದಾಳೆ. ಸದ್ಯ ಫಿಸಿಕಲಿ ಹಾಗೂ ಮೆಂಟಲಿ ಆಕೆ ಸದೃಡವಾಗಿಲ್ಲ. ಹೀಗಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಚೇತರಿಕೆ ಕಂಡ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದರು.
ಕೌಟುಂಬಿಕ ಕಲಹ ಅಂತ ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಿರಣ್ಗೆ ಇತರೆ ಹೆಣ್ಣುಮಕ್ಕಳ ಜೊತೆ ಸಂಪರ್ಕವಿದೆ ಎಂದು ಪ್ರಿಯಾಂಕಾ ಆಗಾಗ್ಗೆ ಮನೆಯಲ್ಲಿ ಜಗಳ ಮಾಡುತ್ತಿದ್ದಳು. ಇದೇ ಕಾರಣಕ್ಕೆ ಈ ಹಿಂದೆಯೂ ಗಂಡನ ಮೇಲೆ ದಾಳಿ ನಡೆಸಿದ್ದಳು. ಚಾಕುವಿನಿಂದ ಬೆದರಿಸಿ, ದಾಳಿ ಮಾಡಿದ್ದಳು. ಆ ಸಮಯದಲ್ಲಿ ಕಿರಣ್ಗೆ ಯಾವುದೇ ಗಾಯಗಳು ಅಥವಾ ಅನಾಹುತ ಸಂಭವಿಸದ ಕಾರಣ ಮಗನ ಮಾತಿಗೆ ಸುಮ್ಮನಾಗಿದ್ದಾಗಿ ಕುಟುಂಬದವರು ಹೇಳಿದ್ದಾರೆ.
ಆ ಮನೆಗೆ ಯಾರೂ ಎಂಟ್ರಿ ಆಗಲು ಸಾಧ್ಯವಿಲ್ಲ. ಇರವುದು ಒಂದೇ ಬಾಗಿಲು ಅದು ಲಾಕ್ ಆಗಿತ್ತು. ಮೊನ್ನೆ ರಾತ್ರಿಯಿಂದಲೂ ಕಿರಣ್ ಪೋಷಕರು ಹಲವಾರು ಬಾರಿ ಫೋನ್ ಕಾಲ್ ಮಾಡಿದ್ದಾರೆ. ಇಷ್ಟಾದರೂ ರಿಸಿವ್ ಮಾಡದ ಹಿನ್ನೆಲೆ ಕುಟುಂಬದವರೇ ಫ್ಲಾಟ್ಗೆ ಹೋಗಿ ಬಾಗಿಲು ಬಡಿದಿದ್ದಾರೆ. ಕೊನೆಗೆ ಪ್ರಿಯಾಂಕಳೇ ಡೋರ್ ಓಪನ್ ಮಾಡಿದ್ದಾಳೆ. ಘಟನೆಯ ಸಿಸಿಟಿವಿ ಫೂಟೇಜ್, ಮೊಬೈಲ್ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದಾರೆ.