ಇನ್ನರ್​ವ್ಹೀಲ್​ ಕ್ಲಬ್​ ಆಫ್​ ಧಾರವಾಡದ ಪದಗ್ರಹಣ ಸಮಾರಂಭ 
ಧಾರವಾಡ

ಧಾರವಾಡ ಇನ್ನರ್​ವ್ಹೀಲ್​ ಕ್ಲಬ್​ ಪದಗ್ರಹಣ

ಮಂಜುನಾಥ ಅಂಗಡಿ
ಧಾರವಾಡ: ಇನ್ನರ್​ವ್ಹೀಲ್​ ಕ್ಲಬ್​ ಆಫ್​ ಧಾರವಾಡದ ಪದಗ್ರಹಣ ಸಮಾರಂಭ ನಗರದ ವಿಠ್ಠಲ್​ ತೇಜ್​ ಕ್ಲಿನಿಕ್​ ಆಡಿಟೋರಿಯಂನಲ್ಲಿ ಇತ್ತೀಚೆಗೆ ಜರುಗಿತು. ಡಿಸ್ಟ್ರಿಕ್ಟ್​ ಖಜಾಂಚಿ ಸಹನಾ ಪೈಕೋಟಿ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಸುನೀತಾ ಮುದಕಣ್ಣನವರ, ಕಾರ್ಯದರ್ಶಿಯಾಗಿ ಮಾಲಾ ಮನಗುಂಡಿ, ಐಎಸ್​ಒ ಆಗಿ ವಿದ್ಯಾ ಭಟ್ಟ, ಸಂಪಾದಕರಾಗಿ ಯಶೋಧಾ ಅಂಗಡಿ, ಖಜಾಂಚಿಯಾಗಿ ಸ್ನೆಹಲ್​ ದೇಶಪಾಂಡೆ ಅಧಿಕಾರ ವಹಿಸಿಕೊಂಡರು.
ಶಾಲಾ ಮಕ್ಕಳಿಗೆ ನೋಟ್​ಬುಕ್​, ಶಾಲಾ ಶುಲ್ಕ ಪಾವತಿ, ಮಹಿಳೆಇಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಸ್ತ್ರೀರೋಗ ತಜ್ಞೆ ಡಾ. ಸೌಭಾಗ್ಯ, ನೇತ್ರ ತಜ್ಞೆ ಡಾ. ನೀತಾ ಸಾಂಬ್ರಾಣಿ, ರೈತ ಮಹಿಳೆಯನ್ನು ಸನ್ಮಾನಿಸಲಾಯಿತು.