ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಂಪಗೆರೆ ಕೆರೆ (lake) ಅಭಿವೃದ್ಧಿಗೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು.  
ಧಾರವಾಡ

ಪ್ರವಾಸಿ ತಾಣವಾಗಿ ಕೆಂಪಗೆರೆ ಕೆರೆ ಅಭಿವೃದ್ಧಿ lake

ಪ್ರಮುಖ ಮುಖ್ಯಾಂಶಗಳು

  • 3.48 ಕೋಟಿ ರೂ. ಹುಡಾ ಅನುದಾನದಲ್ಲಿ ಕಾಮಗಾರಿಗೆ ಶಾಸಕ ಅಬ್ಬಯ್ಯ ಚಾಲನೆ
  • ಈ ಕೆರೆ ಹಾಳು ಕೊಂಪೆಯಾಗಿತ್ತು.
  • ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಕೆಂಪಗೆರೆ ಕೆರೆಯನ್ನು ಹುಡಾದ 3.48 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಿ, ಅವರು ಮಾತನಾಡಿದರು.
ಶಾಸಕನಾಗುವ ಮೊದಲು ಈ ಕೆರೆ ಹಾಳು ಕೊಂಪೆಯಾಗಿತ್ತು. ಅನೇಕ ಜನರು ಇದರ ಬಹುತೇಕ ಜಾಗವನ್ನು ಆಕ್ರಮಿಸಿ, ಉಪಯೋಗ ಮಾಡಿಕೊಳ್ಳುತ್ತಿದ್ದರು. ಅದನ್ನೆಲ್ಲ ತೆರವುಗೊಳಿಸಿ ಕೆರೆ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾಗಿ ತಿಳಿಸಿದರು.
ಕೆರೆ ಹಾಗೂ ಉದ್ಯಾನವನ್ನು ಪ್ರವಾಸಿ ತಾಣವಾಗಿ ಮಾಡಲು ವಿವಿಧ ಇಲಾಖೆಗಳಿಂದ ಸುಮಾರು 9 ಕೋಟಿ ರೂ. ಗೂ ಅಧಿಕ ಅನುದಾನವನ್ನು ಈಗಾಗಲೇ ವೆಚ್ಚ ಮಾಡಲಾಗಿದೆ.
ವಾಕಿಂಗ್ ಪಾತ್, ಪ್ರವೇಶ ದ್ವಾರ, ತಡೆಗೋಡೆ ನಿಮಾಣ, ಫುಡ್​ಕೋರ್ಟ್, ಅರ್ಬನ್ ಫಾರೆಸ್ಟ್ ಪ್ರದೇಶ ನಿರ್ವಣ. ಮಕ್ಕಳ ಆಟಿಕೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಮುಂದಿನ ದಿನಗಳಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಲಾಗುವುದು. 12 ತಿಂಗಳೂ ಕೆರೆ ನೀರಿನಿಂದ ಕಂಗೊಳಿಸುವಂತೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ಹುಡಾ ಅಧ್ಯಕ್ಷ ಶಾಕೀರ ಸನದಿ, ಆಯುಕ್ತ ಸಂತೋಷ ಬಿರಾದಾರ, ನಿರ್ದೇಶಕ ಫಹೀಜ್ ಕಲಘಟಗಿ ಇತರರಿದ್ದರು.