dental ಡೆಂಟಿಸ್ಟ್ ಡಾ. ಇಗ್ನೇಷಿಯಸ್ ಫರ್ನಾಂಡೀಸ್, ಡಾ. ಶಿವಲೀಲಾ ಧೋತ್ರದ, ಡಾ. ಆರ್ಥರ್ ಇತರರು ಮಾಹಿತಿ ನೀಡಿದರು.
- ಧೋತ್ರದ ಸನ್ನಿ ಡೆಂಟಲ್ ಕ್ಲಿನಿಕ್ನಲ್ಲಿ ಸೌಲಭ್ಯ
- ಉತ್ತರ ಕರ್ನಾಟಕದ ಮೊದಲ ಚೆಕ್ ಅಪ್ ರೋಬೋಟ್
ಹುಬ್ಬಳ್ಳಿ: dental ಇಲ್ಲಿಯ ಗೋಕುಲರಸ್ತೆಯ ಬಸವೇಶ್ವರ ನಗರದಲ್ಲಿ ಧೋತ್ರದ ಸನ್ನಿ ಡೆಂಟಲ್ ಆ್ಯಂಡ್ ಆರ್ಥೊಡಾಂಟಿಕ್ಸ್ ಕ್ಲಿನಿಕ್ನಲ್ಲಿ ಅತ್ಯಾಧುನಿಕ ಎಐ ಚಾಲಿತ ದಂತ ಚಿಕಿತ್ಸೆ ಹಾಗೂ ತಪಾಸಣೆ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ ಎಂದು ದಂತವೈದ್ಯ ಡಾ. ಇಗ್ನೇಷಿಯಸ್ ಫೆರ್ನಾಂಡಿಸ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 1ರಂದು ಬೆಳಗ್ಗೆ 10ಕ್ಕೆ ಉತ್ತರ ಕರ್ನಾಟಕದ ಮೊದಲ ಚೆಕ್ ಅಪ್ ರೋಬೋಟ್ ಅನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮೇಯರ್ ಜ್ಯೋತಿ ಪಾಟೀಲ ಪಾಲ್ಗೊಳ್ಳುವರು ಎಂದರು.
ಉತ್ತರ ಕರ್ನಾಟಕ ಭಾಗದ ಜನರಿಗೆ ಮೊದಲ ಬಾರಿ ದಂತಗಳ ಚಿಕಿತ್ಸೆಗಾಗಿ ಕೃತಕ ಬುದ್ದಿಮತ್ತೆಯ ಡೆಂಟಲ್ ಚೆಕ್ ಅಪ್ ರೋಬೋಟ್ ಪರಿಚಯಿಸಲಾಗುತ್ತಿದೆ. 27 ವರ್ಷಗಳಿಂದ ಧೋತ್ರದ ಕ್ಲಿನಿಕ್ ಸಾವಿರಾರು ಜನರಿಗೆ ಸೇವೆ ನೀಡಿದೆ. ಇದರ ಸ್ಥಾಪಕಿಯಾದ, ನನ್ನ ತಾಯಿ ಡಾ. ಶಿವಲೀಲಾ ಧೋತ್ರದ ಅವರು ಓರ್ವ ದಂತ ವೈದ್ಯರಾಗಿ, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಮೊದಲ ಮಹಿಳಾ ಕಾರ್ಯದರ್ಶಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು. ಇದೀಗ ಅವರ ಮಾರ್ಗದರ್ಶನದಲ್ಲಿ ಜನರಿಗೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಬೇಕೆಂಬ ಉದ್ದೇಶದೊಂದಿಗೆ ಡಿಜಿಟಲ್ ಸೇವೆ ಪ್ರಾರಂಭಿಸಲಾಗಿದೆ ಎಂದರು.
ಡಾ. ಆರ್ಥರ್ ಫೆರ್ನಾಂಡಿಸ್. ಲೀಲಾ ಪಾಸ್ತೆ ಇದ್ದರು.