ಬೇಡಿಕೆ (demond) ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬೆಳಗಾವಿಯಲ್ಲಿ ಮಂಗಳವಾರ ಧರಣಿ ನಡೆಯಿತು 
ಧಾರವಾಡ

(demond) ಬೇಡಿಕೆ ಈಡೇರಿಸಲು ಬೆಳಗಾವಿಯಲ್ಲಿ ಧರಣಿ

ಹುಬ್ಬಳ್ಳಿ: ವಿವಿಧ ಬೇಡಿಕೆ (demond) ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬೆಳಗಾವಿಯ ಸುವರ್ಣ ಸೌಧದ ಮುಂದೆ ಮಂಗಳವಾರ ಧರಣಿ ನಡೆಯಿತು.
ಬೆಳಗ್ಗೆ ಆರಂಭವಾದ ಧರಣಿಯಲ್ಲಿ ಹುಬ್ಬಳ್ಳಿ, ಧಾರವಾಡ ಗದಗ, ಬಾಗಲಕೋಟ, ಬೆಳಗಾವಿ, ಹಾವೇರಿ, ವಿಜಯಪುರ, ಉತ್ತರ ಕನ್ನಡ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಿದ್ದರು.
ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಪರಿಷತ್‌ನಲ್ಲಿ ಹಿರಿಯ ನಾಗರಿಕ ಬೇಡಿಕೆ ಈಡೇರಿಸುವ ಕುರಿತು ಗಮನ ಸೆಳೆದರು. ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು.
ಮುಖ್ಯಮಂತ್ರಿ ಪರವಾಗಿ ಪೌರಾಡಳಿತ ಸಚಿವ ರಹೀಮಖಾನ ಧರಣಿ ಸ್ಥಳಕ್ಕೆ ಆಗಮಿಸಿ, ಮನವಿ ಪತ್ರ ಸ್ವೀಕರಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಹಿರಿಯ ನಾಗರಿಕರ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೂಚನೆಯಂತೆ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ, ಜಂಟಿ ನಿರ್ದೇಶಕ ನಟರಾಜ ಧರಣಿ ಸ್ಥಳಕ್ಕೆ ಆಗಮಿಸಿ ಸಚಿವರಿಗೆ ಬರೆದ ಮನವಿ ಪತ್ರ ಸ್ವೀಕರಿಸಿದರು.
ಸಚಿವರೇ ಬಂದು ಭರವಸೆ ನೀಡಬೇಕೆಂದು ಧರಣಿ ನಿರತರು ಆಗ್ರಹಿಸಿದಾಗ ನಿರ್ದೇಶಕರು, ಸಚಿವರಿಗೆ ಈ ವಿಷಯ ಮುಟ್ಟಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಂಘದ ಪದಾಧಿಕಾರಿಗಳನ್ನು ಸುವರ್ಣಸೌಧದ ತಮ್ಮ ಕೊಠಡಿಗೆ ಕರೆಯಿಸಿಕೊಂಡು ಬೇಡಿಕೆಗಳ ಕುರಿತು ಅರ್ಧಗಂಟೆ ಚರ್ಚಿಸಿದರು. ಮುಂಬರುವ ಜನವರಿ 2ನೇ ವಾರದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಆರ್ಥಿಕ ಇಲಾಖೆ ಕಾರ್ಯದರ್ಶಿಗಳು ಹಾಗೂ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಚರ್ಚಿಸಿ ತಿರ್ಮಾನ ಕೈಗೊಳ್ಳಬೇಕೆಂದು ನಿರ್ದೇಶಕರಿಗೆ ಸೂಚಿಸಿದರು.
ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ಪದಾಧಿಕಾರಿಗಳಾದ ಡಾ. ಲಿಂಗರಾಜ ಅಂಗಡಿ, ಡಾ.ಆರ್.ಕೆ. ಮಠದ, ಪಿ.ಪಿ. ಗಾಯಕವಾಡ, ಶಕುಂತಲಾ ಮುಗಳಿ, ಮಂಗಳಾ ಬ್ಯಾಹಟ್ಟಿ, ಸುಲೋಚನಾ ಹಾದಿಮನಿ, ಪ್ರಭಾವತಿ ಶಿವಪ್ಪಯ್ಯನಮಠ, ಶಶಿಕಲಾ ಶಾಸ್ತ್ರಿಮಠ ಮುಂತಾದವರು ಇದ್ದರು.