ಬರಗಾಲ ಘೋಷಿಸುವಂತೆ ರಾಜ್ಯ ರೈತ ಸಂಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂದ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ಧಾರವಾಡ: ಧಾರವಾಡ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಾದ್ಯಂತ ಸಮರ್ಪಕ ಮಳೆಯಾಗದೇ ಯಾವುದೇ ಕೆರೆಗಳು ಭತಿರ್ಯಾಗಿಲ್ಲ. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಹೆಚ್ಚಿನ ರೈತರು ಬೆಳೆ ನಾಟಿ ಮಾಡಲು ಸಾಧ್ಯವಾಗಿಲ್ಲ. ಹಲವು ಕಡೆ ಬಿತ್ತನೆ ಮಾಡಿದ ಪೈರುಗಳು ಮಳೆಯ ಕೊರತೆಯಿಂದ ನಾಶವಾಗಿವೆ. ಇದರ ಪರಿಣಾಮ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಬರಗಾಲ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿ ಎಕರೆಗೆ 40 ಸಾವಿರ ರೂ. ಪರಿಹಾರ ನೀಡಿ ರೈತರ ನೆರವಿಗೆ ಬರಬೇಕು. ಕಲಟಗಿ ತಾಲೂಕು ಸೇರಿ ಅನೇಕ ಭಾಗಗಳಲ್ಲಿ ಬೆಳೆದ ಕಬ್ಬು ಬೆಳೆಯೂ ನಷ್ಟವಾಗಿದ್ದು, ಕಬ್ಬು ಬೆಳೆಯನ್ನೂ ಬೆಳೆ ಪರಿಹಾರ ವ್ಯಾಪ್ತಿಗೆ ಸೇರಿಸಬೇಕು. ರಾಷ್ಟ್ರೀಕೃತ, ಸಹಕಾರಿ ಮತ್ತು ಖಾಸಗಿ ಬ್ಯಾಂಕ್ಗಳ ಬೆಳೆ ಸಾಲವನ್ನೂ ಸರ್ಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕಲಟಗಿ ತಾಲೂಕಿನ ಬೆಡ್ತಿ ಹಳ್ಳದಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಶ್ರೀದಲ್ಲೇ ಮಾಡಬೇಕು. 40 ವರ್ಷದಷ್ಟು ಹಳೆಯದಾಗಿರುವ ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಕೇಬಲ್ಗಳನ್ನು ತೆರವುಗೊಳಿಸಿ, ಸಂಭವನೀಯ ಅಪಘಾತವನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಮಹೇಶ ಬೆಳಗಾಂವಕರ, ಬಸವಣೆಪ್ಪ ಅದರಗುಂಚಿ, ಉಳವಪ್ಪ ಬಳಿಗೇರ, ಬಸನಗೌಡ್ರ ಸಿದ್ದನಗೌಡ್ರ, ವಸಂತ ಡಾಕಪ್ಪನವರ, ಗದಿಗೆಪ್ಪಗೌಡ ಪಾಟೀಲ, ಮಳಪ್ಪ ಹೊನ್ನಿಹಳ್ಳಿ, ಮೂರುಸಾವಿರಪ್ಪ ರಡ್ಡೇರ, ಸಿದ್ದಪ್ಪ ಹಡಪದ, ಚನ್ನಪ್ಪ ಹುಲಮನಿ, ಮೆಹಬೂಬ ಕುಂದಗೋಳ, ಚನ್ನಯ್ಯ ಹಿರೇಮಠ, ಸಹದೇವಪ್ಪ ಪಲ್ಲೇದ, ಯಲ್ಲಪ್ಪ ಗಾಣಿಗೇರ, ಸಂಗಪ್ಪ ಕರತಂಗಿ, ಸುಭಾಷ ಕರತಂಗಿ, ನಾಗಪ್ಪ ಬಳಿಗೇರ, ನಿಂಗಪ್ಪ ಲದ್ದಿಗಟ್ಟಿ, ಬಸಪ್ಪ ಸೋಲಾರಗೊಪ್ಪ, ಬಸಪ್ಪ ನಟಗಲ್ ಇತರರಿದ್ದರು.