ಜಿಲ್ಲಾಧಿಕಾರಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಧಾರವಾಡ: ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಪ್ರದೇಶಗಳಲ್ಲಿನ ಆಶಾ ಕಾರ್ಯಕರ್ತೆಯರನ್ನು ಕೈ ಬಿಡುವುದಕ್ಕೆ ಮುಂದಾಗಿರುವ ಸರ್ಕಾರದ ಕ್ರಮದ ವಿರುದ್ಧ ಆಶಾ ಕಾರ್ಯಕರ್ತೆಯರು ಶುಕ್ರವಾರವೂ ಜಿಲ್ಲಾಽಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎಐಯುಟಿಯುಸಿ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಧಾರವಾಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಆಶಾಗಳು, ಸರ್ಕಾರವು ಆಶಾ ಕಾರ್ಯಕರ್ತೆಯರನ್ನು ಕೈ ಬಿಡುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ಸಚಿವ ಸಂತೋಷ ಲಾಡ್ ಅವರ ಆಪ್ತ ಸಹಾಯಕ ಶ್ರೀಕಾಂತ ಗಾಯಕವಾಡ, `ಸಚಿವರಿಗೆ ನನಗೆ ಕಳುಹಿಸಿದ್ದಾರೆ. ಅವರಿಗೆ ನಿಮ್ಮ ಮನವಿ ತಲುಪಿಸಲಾಗುವುದು' ಎಂದು ಮನವಿ ಸ್ವೀಕರಿಸಿದರು. ಇಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು, ನಮ್ಮ ಬೇಡಿಕೆ ಈಡೇರುವವರೆಗೂ ಮಾ. 31ರಿಂದ ಮತ್ತೆ ಹೋರಾಟ ಮುಂದುವರಿಸುತ್ತೇವೆ ಎಂದು ಶುಕ್ರವಾರ ಪ್ರತಿಭಟನೆಯಿಂದ ತಾತ್ಕಾಲಿಕವಾಗಿ ಹಿಂದೆ ಸರಿದರು.
ಭುವನಾ ಬಳ್ಳಾರಿ, ಮಂಜುಳಾ ಗಾಡಗೋಳಿ, ಶಾಂತಾ ಚವ್ಹಾಣ, ಸರೋಜಾ ಮಡಿವಾಳವರ, ರಾಜೇಶ್ವೇರಿ ಕೋರಿ, ದಾವಲಬಿ ಗೈಬೂನವರ, ದೀಪಾ ಹುಂಡ್ರಿ, ಪ್ರೇಮಾ ಹಡಪದ, ಕವಿತಾ ಕಿತ್ತೂರು, ಲಲಿತಾ ವಾಲೀಕಾರ, ಲಕ್ಷಿ÷್ಮÃ ಸಂಬಾಳಮಠ, ಶಂಕ್ರಮ್ಮ ಗಾಣಿಗೇರ, ರತ್ನಾ ಪಲ್ಲೇದ, ಮಹಾದೇವಿ ಬಂಗಾರಿ ಇತರರಿದ್ದರು.