ಡ್ರಗ್ ಎಕ್ಷನ್ ಫೋರಮ್ ವತಿಯಿಂದ ಪ್ರತಿಭಟನೆ 
ಧಾರವಾಡ

ಉಚಿತ ಔಷಧ ವಿತರಿಸುವಂತೆ ಆಗ್ರಹ

ಜಗದೀಶ ಹೊಂಬಳಿ
ಧಾರವಾಡ: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಗುಣಮಟ್ಟದ ಔಷಧ ಲಭ್ಯವಾಗಬೇಕು. ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿ ಆಗಬೇಕು ಎಂದು ಒತ್ತಾಯಿಸಿ ಡ್ರಗ್ ಎಕ್ಷನ್ ಫೋರಮ್ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಯಿತು.
ಶುಕ್ರವಾರ ನಗರದ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಫೋರಮ್ ಪದಾಽಕಾರಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದರು. ಬಳಿಕ ಜಿಲ್ಲಾಽಕಾರಿ ಕಚೇರಿ ಎದುರು ಪ್ರತಿಭಟಿಸಿದರು. ರೋಗ ಬಂದಾಗ ಚಿಕಿತ್ಸೆಯ ವೆಚ್ಚದ ಶೇ. 60ರಿಂದ 70ರಷ್ಟು ಖರ್ಚು ಔಷಧಿಗಳಿಗೆ ಹೋಗುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಔಷಧಗಳು ಉಚಿತವಾಗಿ ಸಿಗುವಂತೆ ಸರ್ಕಾರ ಕ್ರಮ ವಹಿಸಬೇಕು. ತಮಿಳುನಾಡು, ಕೇರಳ ಹಾಗೂ ರಾಜಸ್ಥಾನಗಳಲ್ಲಿ ಇರುವಂತೆಯೇ ಕರ್ನಾಟಕದಲ್ಲಿಯೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ, ಗುಣಮಟ್ಟದ ಔಷಧ ಸಿಗಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಡಾ. ಗೋಪಾಲ ದಾಬಡೆ, ಸಂಜೀವ ಕುಲಕರ್ಣಿ, ಎಚ್.ಜಿ. ದೇಸಾಯಿ, ಶಾರದಾ ದಾಬಡೆ, ಇಸಬೆಲ್ಲ ಜೇವಿಯರ್, ಭವಾನಿ ಶಂಕರ್‌ಗೌಡ ಇತರರಿದ್ದರು.