ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರಿಂದ ಪ್ರತಿಭಟನೆ 
ಧಾರವಾಡ

ಜಿಲ್ಲೆಯನ್ನು "ಬರಪೀಡಿತ ಪ್ರದೇಶ'ವೆಂದು ಘೋಷಿಸಿ

ಜಗದೀಶ ಹೊಂಬಳಿ
ಧಾರವಾಡ; ಧಾರವಾಡ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜ, ರಾಷ್ಟ್ರೀಯ ರೈತ ಸಂಟನೆ ಜಿಲ್ಲಾ ಟಕದ ನೇತೃತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಜುಬಿಲಿ ವೃತ್ತದಲ್ಲಿ ಜಮಾಯಿಸಿದ ರೈತ ಮುಖಂಡರು, ಡೊಳ್ಳು ಮೇಳದೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹೆಸರು, ಉದ್ದು, ಶೇಂಗಾ, ಹತ್ತಿ, ಸೋಯಾಬಿನ್​, ಈರುಳ್ಳಿ ಬೆಳೆ ಮಳೆ ಕೊರತೆಯಿಂದ ಹಾಳಾಗಿವೆ. ಬರಗಾಲ ಘೋಷಿಸಿ, ಶ್ರೀದಲ್ಲಿ ಬೆಳೆ ಪರಿಹಾರ ನೀಡಬೇಕು. ರೈತರ ಸಾಲ ಸಂರ್ಪೂಣ ಮನ್ನಾ ಮಾಡಬೇಕು. ಜಿಲ್ಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವು ಪೂರೈಸಬೇಕು. ಕಳಸಾ ಬಂಡೂರಿ ನಾಲಾ ಜೋಡಣೆ ಮಾಡಿ, ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು.
ಮಹಾಂತೇಶ ಕಮತ, ಈರಣ್ಣ ಕಂಕೊಳ್ಳಿ, ಮಲ್ಲಣ್ಣ ಮಾರಡಗಿ, ವಿನಯಕುಮಾರ್​ ಪಾಟೀಲ, ನಿಂಗವ್ವ ಕರಿಕಟ್ಟಿ, ವಿರುಪಾಕ್ಷ ಗಿಡಸಕ್ಕನವರ, ಭರಮಗೌಡ ದ್ಯಾಮನಗೌಡರ, ಶಿವಕುಮಾರ ಸೊರಟೂರು, ರಾಮಣ್ಣ ಮುದೆಣ್ಣವರ, ಸಂಗಮೇಶ ಐಹೊಳೆ, ಮಂಜು ನೂಲ್ವಿ, ಎನ್​.ಬಿ. ಜಿರಗೆ ಇತರರಿದ್ದರು.