ಧಾರವಾಡ ತಾ.ಪಂ. ಅಧೀಕ್ಷಕರಿಗೆ ಪಿಡಿಒಗಳು ಮನವಿ ಸಲ್ಲಿಸಿದರು.
ಧಾರವಾಡ: ವಿಬಿ ಜಿ ರಾಮ ಜಿ ಯೋಜನೆಯ ಮೂಲಕ ನಿಯಮಬಾಹಿರ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ ಗ್ರೇಡ್) ಹುದ್ದೆ ಉನ್ನತಿಕರಣ ಸಂ ಆ. 15ರಿಂದ ಪಿಡಿಒಗಳು ಕಾರ್ಯಚಟುವಟಿಕೆ ಬಹಿಷ್ಕರಿಸಿ ಸಂಘಟಿತ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಈ ಕುರಿತು ಧಾರವಾಡ ತಾ.ಪಂ. ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ವಿಬಿ ಜಿ ರಾಮ ಜಿ ಯೋಜನೆಯ ಅನುಷ್ಠಾನದ ಹೆಸರಲ್ಲಿ ಪಿಡಿಒಗಳ ಮೇಲೆ ಅವೈಜ್ಞಾನಿಕ ಹಾಗೂ ನಿಯಮಬಾಹಿರ ಒತ್ತಡ ಹೇರಲಾಗುತ್ತಿದೆ. ಈ ಕುರಿತು ಇಲಾಖೆ ಸಚಿವರ ಕಚೇರಿ ಮತ್ತು ಎಲ್ಲ ಜಿಲ್ಲೆಗಳ ಸಿಇಒಗಳ ಗಮನಕ್ಕೆ ತರಲಾಗಿದೆ. ಯೋಜನೆಗೆ ನಿದಿರ್ಷ್ಟ ನಿಯಮಾವಳಿಗಳಿಲ್ಲ. ಒಂದು ಜಿಲ್ಲೆಯಲ್ಲಿ ಅನುಮತಿಸುವ ಕಾಮಗಾರಿಯನ್ನು ಮತ್ತೊಂದು ಜಿಲ್ಲೆಯಲ್ಲಿ ಮಾಡಲು ಬರುವುದಿಲ್ಲ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆ ಇಲ್ಲದೆ ಹಾಗೂ ಅನುಮೋದಿತ ಕ್ರಿಯಾಯೋಜನೆ ಇಲ್ಲದೆ ಕೆಲಸ ಪ್ರಾರಂಭಿಸುವಂತೆ ಒತ್ತಾಯಿಸಲಾಗುತ್ತಿದೆ. ನೈಜ ಬೇಡಿಕೆ ಇಲ್ಲದಿದ್ದರೂ ಕೃತಕ ಎನ್ಎಂಆರ್ ತೆಗೆಯಲು ಒತ್ತಾಯಿಸಿ ಕಚೇರಿ ಅವಧಿ ಮೀರಿ ರಾತ್ರಿ ವೇಳೆಯ ಸಭೆಗಳು, ಶೋಕಾಸ್ ನೋಟಿಸ್ ಹಾಗೂ ಅಮಾನತಿನ ಬೆದರಿಕೆಗಳ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಆದ್ದರಿಂದ ಕೂಡಲೇ ಏಕರೂಪದ ಸ್ಪಷ್ಟ ಎಸ್ಒಪಿ ಬಿಡುಗಡೆ ಮಾಡಬೇಕು. 5 ಲಕ್ಷ ರೂಪಾಯಿಯೊಳಗಿನ ಕಾಮಗಾರಿಗಳಿಗೆ ಅಧಿಕೃತ ವಿನಾಯತಿ ಆದೇಶ ನೀಡಬೇಕು. ಆ. 15ರೊಳಗೆ ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ವಿಬಿ ಜಿ ರಾಮ ಜಿಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸದೆ ಕಾರ್ಯಚಟುವಟಿಕೆಗಳನ್ನು ಸಂರ್ಪೂಣ ಬಹಿಷ್ಕರಿಸಲಾಗುವುದು ಎಂದು ಸಂಘದ ಸದಸ್ಯರು ಮನವಿಯಲ್ಲಿ ತಿಳಿಸಿದ್ದಾರೆ.