dead ox ಬೆಳಗಾವಿಯ ಬಾಬಾಜಾನ್ ಕುಂಡವಾಲೆ, ಯಾಸೀನ್ ತಾಳಿಕೋಟಿ ವಿರುದ್ಧ ಪ್ರಕರಣ 
ಧಾರವಾಡ

dead ox ಮೃತ ಎತ್ತು ಸಾಗಿಸುತ್ತಿದ್ದವರ ಮೇಲೆ ಕೇಸ್

ಮರಿದೇವ ಹೂಗಾರ
ಹುಬ್ಬಳ್ಳಿ: ಗೂಡ್ಸ್ ವಾಹನದಲ್ಲಿ ಸತ್ತ ಸ್ಥಿತಿಯಲ್ಲಿದ್ದ ಎತ್ತು dead ox ಸಾಗಿಸುತ್ತಿದ್ದದವರು ಸಮರ್ಪಕ ಉತ್ತರ ನೀಡದ್ದರಿಂದ ಇಬ್ಬರ ವಿರುದ್ಧ ಇಲ್ಲಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಬಾಬಾಜಾನ್ ಕುಂಡವಾಲೆ, ಯಾಸೀನ್ ತಾಳಿಕೋಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಗಬ್ಬೂರ ಸರ್ಕಲ್‌ನಲ್ಲಿದ್ದ ಪೊಲೀಸರು ವಾಹನ ಬರುತ್ತಿದ್ದಂತೆಯೇ ನಿಲ್ಲಿಸಲು ಹೇಳಿದ್ದಾರೆ. ವಾಹನ ವೇಗವಾಗಿ ಹೋಗಿದ್ದರಿಂದ ಬೆನ್ನು ಬಿದ್ದ ಪೊಲೀಸರು, ಬಂಕಾಪೂರ ಚೌಕ್ ಹತ್ತಿರ ವಾಹನ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸತ್ತ ಎತ್ತು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.