Cylinder refilling ಕಮರಿಪೇಟೆ ಠಾಣೆಯಲ್ಲಿ ಪ್ರಕರಣ 
ಧಾರವಾಡ

Cylinder refilling ಸಿಲಿಂಡರ್ ರೀಫಿಲ್ಲಿಂಗ್ ದಂಧೆಯವನ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಮೋಮಿನ ಪ್ಲಾಟ್‌ನಲ್ಲಿ ಮಂಗಳವಾರ ಸಂಜೆ ಗೃಹ ಬಳಕೆಯ ಸಿಲಿಂಡರ್‌ನಿಂದ ವಾಣಿಜ್ಯ ಬಳಕೆಯ ಸಣ್ಣ ಸಿಲಿಂಡರ್‌ಗಳಿಗೆ

Cylinder refilling

ಅನಿಲ ತುಂಬಿ ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಒಂದು ಅಡುಗೆ ಅನಿಲ ಸಿಲಿಂಡರ್ ಮತ್ತು ನಾಲ್ಕು ಸಣ್ಣ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಹೀರ ಐ. ಎಂಬಾತ ಗೃಹ ಬಳಕೆಯ ಸಿಲಿಂಡರ್‌ಗಳಿಂದ ಸಣ್ಣ ಸಿಲಿಂಡರ್‌ಗಳಿಗೆ ಅನಿಲವನ್ನು ಕನ್ವರ್ಟರ್ ಮೂಲಕ ತುಂಬಿ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕಮರಿಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.