ಒಂದೇ ಬ್ಯಾಂಕ್ ಖಾತೆಗೆ (cyber) ಕೋಟ್ಯಂತರ ಹಣ ವರ್ಗಾವಣೆ 
ಧಾರವಾಡ

(cyber) ಹಣ ವರ್ಗಾವಣೆ ಪ್ರಕರಣದಲ್ಲಿ ಇಬ್ಬರ ಬಂಧನ

ಹುಬ್ಬಳ್ಳಿ: ಬಾಡಿಗೆ ಬ್ಯಾಂಕ್ ಖಾತೆ (ಮ್ಯೂಟ್ ಅಕೌಂಟ್) ಹಸ್ತಾಂತರ ಹಾಗೂ ಒಂದೇ ಬ್ಯಾಂಕ್ ಖಾತೆಗೆ (cyber) ಕೋಟ್ಯಂತರ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಸಿಇಎನ್ ಕ್ರೈಂ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಗೋಪನಕೊಪ್ಪದ ಆಟೋ ಚಾಲಕ ಇರ್ಫಾನ್, ಕೇಶ್ವಾಪೂರದ ಅರುಣ ಜಮಖಂಡಿ ಅವರನ್ನು ಮೊದಲು ವಶಕ್ಕೆ ವಿಚಾರಣೆ ನಡೆಸಿದ್ದ ಪೊಲೀಸರು, ನಂತರ ಬಂಧಿಸಿ ನ್ಯಾಯಾಂಗ ಸುಪರ್ದಿಗೆ ಒಪ್ಪಿಸಿದ್ದಾರೆ.
ಇರ್ಫಾನ್ ಬ್ಯಾಂಕ್ ಪಾಸ್‌ಬುಕ್ ಅನ್ನು ಅರುಣ ಜಮಖಂಡಿ ಪಡೆದು ಸೈಬರ್ ಅಪರಾಧಗಳಿಗೆ ಬಳಕೆ ಮಾಡಿದ್ದ. ರಾಜ್ಯ ಸೈಬರ್ ಕಮಾಂಡ್ ಘಟಕ ನೀಡಿದ್ದ ವರದಿಯನ್ವಯ ಬೆನ್ನು ಬಿದ್ದ ಪೊಲೀಸರು, ಇಬ್ಬರನ್ನು ಮೊದಲು ವಿಚಾರಣೆ ನಡೆಸಿದ್ದರು. ಸೈಬರ್ ವಂಚನೆಯ ವರ್ಗಾವಣೆ ಹಣ ಮೂಲ ಖಾತೆದಾರರಿಗೆ ಸರಬರಾಜು ಆಗಿದ್ದರ ಕುರಿತು ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.