(cyber fraud) ಫೇಸ್‌ಬುಕ್‌ನಲ್ಲಿ ವಿವೋ ಮೊಬೈಲ್ ಫೋನ್ ಖರೀದಿಸಲು ಮುಂದಾದ ಶಿಕ್ಷಕ
ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ವಿವೋ ಮೊಬೈಲ್ ಫೋನ್ ಖರೀದಿಸಲು ಮುಂದಾದ ಶಿಕ್ಷಕರೊಬ್ಬರು ಆನ್‌ಲೈನ್ ವಂಚಕರ (cyber fraud) ಸೆರೆಗೆ ಸಿಕ್ಕು ಬರೋಬ್ಬರಿ 5.22 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಧಾರವಾಡ ಪ್ರಭಾಕರ ವಂಚನೆಗೆ ಒಳಗಾದ ಶಿಕ್ಷಕ. ಫೇಸ್‌ಬುಕ್ ಸ್ಕ್ರಾಲ್ ಮಾಡುವ ವೇಳೆ ಜಾಹೀರಾತು ನೋಡಿದ್ದಾರೆ. ಅದರಲ್ಲಿದ್ದ ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂಪರ್ಕಿಸಿ ವಿವೋ ಫೋನ್ ಖರೀದಿಸಲು ಮುಂದಾಗಿದ್ದಾರೆ. ಮುಂಗಡ ಬುಕಿಂಗ್‌ಗೆ 2 ಸಾವಿರ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ. ನಂತರ ಇತರ ಚಾರ್ಜ್ ಎಂದು ವಂಚಕರು ಕೇಳಿದಂತೆ 5,22,174 ರೂ. ವರ್ಗಾಯಿಸಿ ವಂಚನೆಗೆ ಒಳಗಾಗಿದ್ದೇನೆ ಎಂದು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.