ಹುಬ್ಬಳ್ಳಿ: ವರ್ಕ್ ಫ್ರಾಮ್ ಹೋಮ್ ಉದ್ಯೋಗ ನೀಡುವುದಾಗಿ ನಂಬಿಸಿದ ವಂಚಕರು, ಧಾರವಾಡದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 14.23 ಲಕ್ಷ ರೂ. ಆನ್‌ಲೈನ್ (cyber) ಮೂಲಕ ವರ್ಗಾಯಿಸಿಕೊಂಡಿದ್ದಾರೆ.
ಅಂಬಿಕಾ ವಂಚನೆಗೆ ಒಳಗಾದವರು. ವಂಚಕರು ವರ್ಕ್ ಫ್ರಾಮ್ ಹೋಮ್ ಕುರಿತು ಸಂದೇಶ ಕಳುಹಿಸಿ, ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದಾರೆ. ಬಳಿಕ ಮೋನಿಕಾ ಅಗರವಾಲ, ಪೂಜಾ ಎಂಬುವವರು ಹಣಕಾಸಿನ ಅಧಿಕಾರಿ ಎಂದು ಹೇಳಿಕೊಂಡು ಕೆಲ ಟಾಸ್ಕ್ ನೀಡಿ ರೇಟಿಂಗ್ ಕೊಡಲು ತಿಳಿಸಿದ್ದಾರೆ.
ಬಳಿಕ ಅಂಬಿಕಾ ಅವರ ಖಾತೆಯಿಂದ 5.50 ಲಕ್ಷ ರೂ., 6.78 ಲಕ್ಷ ರೂ. ಹಾಗೂ 1.95 ಲಕ್ಷ ರೂ. ಸೇರಿ ಒಟ್ಟು 14.23 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.