cyber crime ಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ 
ಧಾರವಾಡ

cyber crime ವಾಟ್ಸ್‌ಆ್ಯಪ್ ಗ್ರೂಪ್ ಹೆಸರಲ್ಲಿ ವಂಚನೆ

ಹುಬ್ಬಳ್ಳಿ: ಟ್ರೇಡಿಂಗ್ ಹೆಸರಿನಲ್ಲಿ ಹಾರಿಜನ್ 881 ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿ cyber crime, ಲಾಭದಾಸೆ ತೋರಿಸಿ ಧಾರವಾಡದ ವ್ಯಕ್ತಿಯೊಬ್ಬರಿಗೆ 17 ಲಕ್ಷ ರೂ. ವಂಚಿಸಲಾಗಿದೆ.
ಅಶೋಕ ಬಿ. ವಂಚನೆಗೆ ಒಳಗಾದವರು.
ಮೊಬೈಲ್ ಫೋನ್ ನೋಡುತ್ತ ಕುಳಿತಿದ್ದ ವೇಳೆ ಪ್ರೇಮಪ್ರಕಾಶ ವರ್ಮಾ ಹೆಸರಿನಲ್ಲಿರುವ ಹಾರಿಜನ್ 881 ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾರೆ. ನಂತರ ಟ್ರೇಡಿಂಗ್ ಮಾಡುವ ಬಗ್ಗೆ ಉಚಿತ ತರಬೇತಿ ಕೊಡುವುದಾಗಿ ನಂಬಿಸಿದ್ದಾರೆ. ಗ್ರೂಪ್‌ನಲ್ಲಿದ್ದ ಅನನ್ಯ ಕುಲಕರ್ಣಿ ಎಂಬುವವರು ಬೇರೆ ನಂಬರ್ ಮೂಲಕ ಅಶೋಕ ಅವರನ್ನು ಸಂಪರ್ಕಿಸಿ, ಹೊಸದಾಗಿ ಟ್ರೇಡಿಂಗ್ ಮಾಡುವವರ ಸಲುವಾಗಿ ಪಿನ್ಸೋಲ್ ಸಾರಥಿ ಪ್ಲಾನ್ ಎಂಬ ಅಪ್ಲಿಕೇಶನ್‌ದಲ್ಲಿ ಲಾಭದಾಸೆ ತೋರಿಸಿದ್ದಾರೆ. ಹಂತ ಹಂತವಾಗಿ 17 ಲಕ್ಷ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.