ಧಾರವಾಡದ ನೌಕರರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಪಟ್ಟಜಮೀನು ಕ್ರಷರ್ crusherಹಾಗೂ ಗಣಿ ಮಾಲೀಕರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 
ಧಾರವಾಡ

crusherಅವೈಜ್ಞಾನಿಕ ದಂಡ ವಿಧಿಸಿದ್ದಕ್ಕೆ ಖಂಡನೆ

ಹುಬ್ಬಳ್ಳಿ: ಧಾರವಾಡದ ನೌಕರರ ಭವನದಲ್ಲಿ ಧಾರವಾಡ ಜಿಲ್ಲಾ ಪಟ್ಟಜಮೀನು ಕ್ರಷರ್ crusher ಹಾಗೂ ಗಣಿ ಮಾಲೀಕರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗಿರೀಶ ಮಲ್ನಾಡ (ಗೌರವಾಧ್ಯಕ್ಷ), ಶಿವಾನಂದ ಉಳ್ಳೇಗಡ್ಡಿ (ಅಧ್ಯಕ್ಷ), ವಿನಯ ನೀಲ್‌ರೆಡ್ಡಿ (ಉಪಾಧ್ಯಕ್ಷ), ನಂದೀಶ ತಾಳೂರ (ಕಾರ್ಯದರ್ಶಿ), ಉಮಾಕಾಂತ ಮೆಹರವಾಡೆ (ಖಜಾಂಚಿ), ವಿಕಾಸ ಮರಕುಂಬಿ (ಕಾನೂನು ಸಲಹೆಗಾರ), ಮನೋಹರ ಯಾದವ, ರಾಜು ಪಾಟೀಲ, ಶಿವರುದ್ರ ಗೋಕುಲ, ವಜ್ರಮುನಿ ಶಿರಕೋಳ, ವೀರನಗೌಡ ಪಾಟೀಲ, ಶಿವಾನಂದ ಗಾಮನಗಟ್ಟಿ, ದೀಪಕಪವಾರ್, ಸಂಜೀವ ತುರುಮರಿ (ಆಡಳಿತ ಮಂಡಳಿ ಸದಸ್ಯರು) ಅವರನ್ನು ಗೌರವಿಸಲಾಯಿತು. ರಾಜ್ಯ ಅಧ್ಯಕ್ಷ ವಿ.ಎಸ್. ಪಾಟೀಲ ಅತಿಥಿಗಳಾಗಿ ಆಗಮಿಸಿದ್ದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕಲ್ಲುಗಣಿ ಮತ್ತು ಕ್ರಷರ್‌ಗಳ ಮೇಲೆ ಲಕ್ಷಾಂತರ ರೂ. ದಂಡ ವಿಧಿಸಿರುವುದು ಅವೈಜ್ಞಾನಿಕ ಎಂದು ಸಭೆಯಲ್ಲಿ ಖಂಡಿಸಲಾಯಿತು. ಈ ವಿಷಯದ ಬಗ್ಗೆ ಸರ್ಕಾರ ಗಮನ ಸೆಳೆಯುವ ಇಂಗಿತ ವ್ಯಕ್ತಪಡಿಸಲಾಯಿತು. ದರ ಪರಿಷ್ಕರಣೆಯೂ ಜಾರಿಗೆ ಬರುವಂತೆಯೂ ಗಮನ ಸೆಳೆಯಲಾಯಿತು.