ನವಲಗುಂದ ತಾಲೂಕು ಶಿರೂರ ಗ್ರಾಮದ ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ಅವರು ಕಾಯಿ ಬಿಡದ ಹೆಸರು ಬೆಳೆಯನ್ನು ಧಾರವಾಡ ಉಸ್ತುವಾರಿ ಸಚಿವ ಸಂತೋಷ ಲಾಡ್​ಗೆ ತೋರಿಸಿದರು. 
ಧಾರವಾಡ

ಫಸಲು ನಷ್ಟ ಪರಿಶೀಲಿಸಿ ಬೆಳೆ ಹಾನಿ ಪರಿಹಾರ

ಮಂಜುನಾಥ ಅಂಗಡಿ

ಧಾರವಾಡ:

ಜಿಲ್ಲೆಯ ಕೆಲವೆಡೆ ಮಳೆಯಾಗಿದೆ, ಕೆಲವೆಡೆ ಆಗಿಲ್ಲ. ಕೆಲ ತಾಲೂಕಿನಲ್ಲಿ ಹಸಿರು ಬೆಳೆಗಳು ಕಾಣುತ್ತಿವೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಕಾಯಿ ಬಿಟ್ಟಿಲ್ಲ. ಆದ್ದರಿಂದ ಸರ್ಕಾರ ಪ್ರತಿಯೊಂದು ಸರ್ವೇ ನಂಬರ್​ಗಳ ಪ್ರಕಾರ ಸರ್ವೇ ಮಾಡಿಸಿ ಸಲು ನಷ್ಟ ಆಧರಿಸಿ ಬೆಳೆ ಹಾನಿ ಪರಿಹಾರ ಮೊತ್ತ ನಿರ್ಧರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ತಿಳಿಸಿದರು.

ನವಲಗುಂದ ತಾಲೂಕು ಶಿರೂರ ಗ್ರಾಮದ ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ನೇತೃತ್ವದಲ್ಲಿ ರೈತರು ಕಾಯಿ ಬಿಡದ ಹೆಸರು ಬೆಳೆಯನ್ನು ತೋರಿಸಿದ್ದಾರೆ. ಆದ್ದರಿಂದ ಹಾನಿ ಪ್ರಮಾಣ ಮತ್ತು ಮಾನದಂಡಗಳನ್ನು ಅವಲೋಕಿಸಿ ಪರಿಹಾರದ ಮೊತ್ತ ನಿಗದಿಪಡಿಸಲಾಗುವುದು ಎಂದರು.