ಭಾರತೀಯ (Cricekt) ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆ ಆಯೋಜಿಸಿರುವ ಸಿಎ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು. 9 ತಂಡಗಳ ಮಾಲೀಕರು ಪಾಲ್ಗೊಂಡಿದ್ದರು. 
ಧಾರವಾಡ

ಸಿಪಿಎಲ್ (Cricket) ಕ್ರಿಕೆಟ್ ಪಂದ್ಯಾವಳಿ 21ರಂದು

ಸಂತೋಷ ವೈದ್ಯ
ಹುಬ್ಬಳ್ಳಿ: ಭಾರತೀಯ (Cricket) ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯ ಹುಬ್ಬಳ್ಳಿ ಶಾಖೆಯು ಡಿ. 21ರಂದು ಕೇಶ್ವಾಪುರ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಸಿಎ ಪ್ರೀಮಿಯರ್ ಲೀಗ್ (ಸಿಪಿಎಲ್) ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ.
ಕೇಶ್ವಾಪುರದ ಐಸಿಎಐ ಭವನದಲ್ಲಿ ಮಂಗಳವಾರ ಈ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಯಿತು. ಶಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ವೃತ್ತಿಪರ ಆಟಗಾರರ ಹರಾಜು ಮೂಲಕ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಒಂಬತ್ತು ತಂಡ ಮಾಲೀಕರು ಭಾಗವಹಿಸಿದ್ದರು. ಇದೇ ವೇಳೆ ಸಿಪಿಎಲ್ ಟ್ರೋಫಿ ಅನಾವರಣಗೊಳಿಸಲಾಯಿತು.
ಲೆಕ್ಕ ಪರಿಶೋಧಕ ಚನ್ನವೀರ ಮುಂಗುರವಾಡಿ ಮಾತನಾಡಿ, ಶಾಖೆಯ ಹೊಸ ಪ್ರಯತ್ನವನ್ನು ಶ್ಲಾಘಿಸಿ, ಭವಿಷ್ಯದಲ್ಲೂ ಇಂತಹ ವಿಶಿಷ್ಟ ಹಾಗೂ ಪ್ರಯೋಜನಕಾರಿ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಕರೆ ನೀಡಿದರು.
ಹುಬ್ಬಳ್ಳಿ ಶಾಖೆ ಅಧ್ಯಕ್ಷ ಅಕ್ಷಯಕುಮಾರ ಸಿಂಘಿ ಸ್ವಾಗತಿಸಿದರು. ಕಾರ್ಯದರ್ಶಿ ಮಂಜುನಾಥ ಮೇಟಿ, ನವೀನ ಓಸ್ತವಾಲ್, ವಿಶ್ವನಾಥ ವಾಲ್ವೇಕರ ಇದ್ದರು.