ಧಾರವಾಡ ತಾಲೂಕಿನ ಗುಂಗರಗಟ್ಟಿ ತರಬೇತಿ ಕೇಂದ್ರದಲ್ಲಿ ವಿಶೇಷ ಕಾಡಿರ್ಯೋ ಪಲ್ಮನರಿ ರಿಸಸಿಟೇಷನ್ (ಸಿ.ಪಿ.ಆರ್.) ತರಬೇತಿ ನೀಡಲಾಯಿತು.
ಧಾರವಾಡ: ಭಾರತೀಯ ಶಿಶುವೈದ್ಯರ ಸಂಘದ ಜಿಲ್ಲಾ ಶಾಖೆಯಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ತಾಲೂಕಿನ ಗುಂಗರಗಟ್ಟಿ ತರಬೇತಿ ಕೇಂದ್ರದಲ್ಲಿ ವಿಶೇಷ ಸಿ.ಪಿ.ಆರ್ (ಕಾಡಿರ್ಯೋ ಪಲ್ಮನರಿ ರಿಸಸಿಟೇಷನ್) ತರಬೇತಿ ನೀಡಲಾಯಿತು. ಸುಮಾರು 140 ಅರಣ್ಯ ರಕ್ಷಕ ಪ್ರಶಿಕ್ಷಣಾಥಿರ್ಗಳು ಪಾಲ್ಗೊಂಡು ಜೀವರಕ್ಷಕ ಕೌಶಲಗಳ ತರಬೇತಿ ಪಡೆದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವೇರಿ ಉದ್ಘಾಟಿಸಿ ಮಾತನಾಡಿ, ಅರಣ್ಯ ಹಾಗೂ ದುರ್ಗಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಸಿಬ್ಬಂದಿಗೆ ಯಾವ ಕ್ಷಣದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಬರುತ್ತವೆ ಎಂಬುದು ಗೊತ್ತಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ತುರ್ತು ವೈದ್ಯಕಿಯ ಜಾಗೃತಿ ಮತ್ತು ತರಬೇತಿ ಅತ್ಯಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಎಪಿ ಜಿಲ್ಲಾ ಶಾಖೆ ಅಧ್ಯಕ್ಷ ಡಾ. ಕವನ್ ದೇಶಪಾಂಡೆ ಮಾತನಾಡಿ, ಅಪಘಾತಗಳು ಸಂಭವಿಸಿದಾಗ ಅಥವಾ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಾಗ ತುರ್ತು ಸಿಪಿಆರ್ ನೀಡುವುದು ಅತಿ ಮುಖ್ಯ. ವೈದ್ಯಕಿಯ ನೆರವು ಸಿಗುವ ಮುನ್ನ ನೀಡುವ ಪ್ರಾಥಮಿಕ ಚಿಕಿತ್ಸೆಯು ಜೀವ ಉಳಿಸುವಲ್ಲಿ ನೆರವಾಗುತ್ತದೆ ಎಂದರು.
ಮಕ್ಕಳ ತೀವ್ರ ನಿಗಾ ತಜ್ಞ ಡಾ. ಅಲೋಕ ಪಾಟೀಲ ತಾಂತ್ರಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರದಿಪ ಪವಾರ ಇದ್ದರು.