ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲನಿಯ ಉದ್ಯಾನದಲ್ಲಿ (congress) ಎಚ್.ಎಂ. ರೇವಣ್ಣ ಮಾತನಾಡಿದರು.  
ಧಾರವಾಡ

(congress) ಉತ್ತಮ ಕೆಲಸ ಮಾಡುವವರಿಗೆ ಕಾಂಗ್ರೆಸ್‌ನಿಂದ ಫಲ

ಹುಬ್ಬಳ್ಳಿ: ಕಾರ್ಯಕರ್ತರು ಮಾಡುವ (congress) ಕೆಲಸದ ಮೇಲೆ ಫಲ ಸಿಗಲಿದೆ. ಈ ನಿಟ್ಟಿನಲ್ಲಿ ಕಾರ್ಯನಿರತವಾಗಿರುವ ರಜತ್ ಉಳ್ಳಾಗಡ್ಡಿಮಠ ಅವರಿಗೆ ಮುಂದೊಂದು ದಿನ ಫಲ ಸಿಗಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ. ರೇವಣ್ಣ ವಿಶ್ವಾಸ ತುಂಬಿದರು.
ಇಲ್ಲಿಯ ಗೋಕುಲ ರಸ್ತೆಯ ನಂದಿನಿ ಲೇಔಟ್‌ನ ಪ್ರಿಯದರ್ಶಿನಿ ಕಾಲನಿಯ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ 15ನೇ ದಿನದ ‘ನುಡಿದಂತೆ ನಡೆದ ಕಾಂಗ್ರೆಸ್ ಯಾತ್ರೆ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದೆ. ಮನೆ ಮನೆಗೆ ಹೋಗಿ ಇದರ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಜನಮಾನಸದಲ್ಲಿ ಸ್ಥಿರಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ವ್ಯಂಗ್ಯವಾಡಿದರು. ಅವರೇ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿಯನ್ನು ಜಾರಿಗೆ ತಂದಿದ್ದಾರೆ. ನಮ್ಮದೇ ಕಾಪಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಟ್ಟಿ ಭಾಗ್ಯ ನಂಬಬೇಡಿ ಎಂದು ಅವರೇ ಬಿಹಾರದಲ್ಲಿ ಜಾರಿಗೆ ತಂದು ಗೆದ್ದರು ಎಂದು ವ್ಯಂಗ್ಯವಾಡಿದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಚನೆಗೆ ಮುನ್ನ ಗ್ಯಾರಂಟಿ ಕಾರ್ಡ್ ಕೊಟ್ಟ ಪರಿಣಾಮ ಮತದಾರರು ಸುಭದ್ರ ಸರ್ಕಾರ ನೀಡಿದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಸ್ತ್ರೀಶಕ್ತಿಯಲ್ಲಿ ವಿಶ್ವದಾಖಲೆಯಾಗಿದೆ. ಆಗ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಕುಹಕವಾಡಿದರು. ಈಗ ತಾವೇ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಗೆಲ್ಲುತ್ತಿದ್ದಾರೆ ಎಂದು ಕುಟುಕಿದರು.
ಪಾಲಿಕೆ ಸದಸ್ಯರಾದ ಸೆಂಥಿಲ್‌ಕುಮಾರ, ಚೇತನ ಹಿರೇಕೆರೂರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಪ್ರಮುಖರಾದ ಪ್ರಕಾಶ ಹಳಿಯಾಳ, ವೀರೇಶ ಕಡಕೋಳಮಠ, ಪ್ರೇಮ್ ಜಾಧವ, ಶಿವಾನಂದ ಮುತ್ತಣ್ಣವರ, ಬಾಳಮ್ಮ ಜಂಗನವರ, ಮೇಘನಾ ಹಿರೇಮಠ, ಕಲಾವತಿ ದತ್ತವಾಡ, ಸ್ನೇಹಾ ಜಾಧವ, ಕುಮಾರ ಗೌರಕ್ಕನವರ, ಮಹ್ಮದ್‌ಶರೀಫ ಗರಗದ, ಇತರರು ಇದ್ದರು. ನಂತರ ಉದ್ಯಾನದಿಂದ ತುಳಜಾಭವಾನಿ ದೇವಸ್ಥಾನದವರೆಗೆ ಯಾತ್ರೆ ಜರುಗಿತು.