Speaker ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ. 
ಧಾರವಾಡ

ದಬ್ಬಾಳಿಕೆಯಿಂದ ಸಭಾಪತಿ ರಾಜೀನಾಮೆ ಪಡೆದ ಕಾಂಗ್ರೆಸ್ Speaker

ಆನಂದಕುಮಾರ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ಜೋರಾಗುತ್ತಿದೆ
  • ಅಭಿವೃದ್ಧಿ ಕೆಲಸಗಳನ್ನು ಈ ಸರ್ಕಾರ ಮಾಡುತ್ತಿಲ್ಲ.
  • ದಬ್ಬಾಳಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ, ಗೂಂಡಾ ರಾಜಕಾರಣ ಜೋರಾಗುತ್ತಿದೆ ಎಂದರು. 
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಹಾಗೂ ಇನ್ನಿತರ ಮುಖಂಡರೊಂದಿಗೆ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ವಿಷಯ ಹೊರಬಂದಿತು. 
ಕಾಂಗ್ರೆಸ್ ನಾಯಕರ ವರ್ತನೆಯಿಂದ ಹೊರಟ್ಟಿಯವರು ಬಹಳ ಘಾಸಿಯಾಗಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಹೊರಟ್ಟಿ ಅವರು ಆ. 14ರಂದು ಸದನಕ್ಕೆ ಧನ್ಯವಾದ ತಿಳಿಸಿ, ರಾಜೀನಾಮೆ ಕೊಡುವುದಾಗಿ ಈ ಮುಂಚೆಯೇ ಹೇಳಿದ್ದರು. ಅಂತವರ ಮೇಲೆ ಕಾಂಗ್ರೆಸ್​ನವರು ದಬ್ಬಾಳಿಕೆ ನಡೆಸಿ, ರಾಜೀನಾಮೆ ಕೊಡಿಸುವ ಅವಸರ ಹಾಗೂ ಅವಶ್ಯಕತೆ ಏನಿತ್ತು ? ಕಾಂಗ್ರೆಸ್ ನಾಯಕರ ಈ ರೀತಿಯ ದಬ್ಬಾಳಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು. 
ಆ. 13 ರಿಂದ ನಡೆಯಲಿರುವ ಅಧಿವೇಶನದಲ್ಲಿ ಕಾಂಗ್ರೆಸ್ ದಬ್ಬಾಳಿಕೆ ಕುರಿತು ಧ್ವನಿ ಎತ್ತುತ್ತೇವೆ. ಇದರೊಂದಿಗೆ ನಾಗೇಂದ್ರ ಅವರ ಪ್ರಕರಣ, ಗೃಹಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ ರೂ. ಬಾಕಿ, ಬಿಡದಿ ಟೌನ್​ಶಿಪ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು. 
ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ, ಧಾರವಾಡದ ಎಫ್​ಎಂಸಿಜಿ ಕ್ಲಸ್ಟರ್​ನಲ್ಲಿ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಈ ಸರ್ಕಾರ ಮಾಡುತ್ತಿಲ್ಲ. ಅಷ್ಟಕ್ಕೂ ಈ ಸರ್ಕಾರದ ಬಳಿ ಹಣವೂ ಇಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದರು.