congress protest ರಸ್ತೆ ಮೇಲೆ ಚಹಾ ತಯಾರಿಸುವ ಮೂಲಕ ಹುಬ್ಬಳ್ಳಿ ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪನಕೊಪ್ಪದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿ ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಗೋಪನಕೊಪ್ಪದಲ್ಲಿ ಬುಧವಾರ ವಿನೂತನ ಪ್ರತಿಭಟನೆ congress protest ನಡೆಯಿತು.
ರಸ್ತೆ ಮೇಲೆ ಸೌದೆ ಒಲೆ ಹಚ್ಚಿ ಚಹಾ ತಯಾರಿಸಿ, ಸಾರ್ವಜನಿಕರಿಗೆ ಹಂಚುವ ಮೂಲಕ ಮೋದಿ ಸರ್ಕಾರದ ವಿರುದ್ಧ ೋಷಣೆ ಕೂಗಲಾಯಿತು.
ಹು-ಧಾ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮ ಬಲೋಗಿ ಮಾತನಾಡಿ, ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರ ಹೊರೆ ಜನಸಾಮಾನ್ಯರು ಹಾಗೂ ಬಡ ಕುಟುಂಬಗಳ ಮೇಲೆ ಬೀಳುತ್ತಿದೆ. ತಕ್ಷಣವೇ ಸಿಲಿಂಡರ್ ದರ ಇಳಿಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸ್ನೇಹಾ ಪ್ರಕಾಶ ಜಾಧವ, ಮೇಘನಾ ಹಿರೇಮಠ, ವಾರ್ಡ್ ಅಧ್ಯಕ್ಷೆ ರೇಖಾ ಜಟ್ಟಪ್ಪನವರ, ಪ್ರಮುಖರಾದ ಸುಜಾತ ಹಾಲಣ್ಣವರ, ಗೀತಾ ಶೆಟ್ಟಿ, ಸುನಂದಾ ಕುಸುಗಲ್, ರೂಪಾ ಕುರಹಟ್ಟಿ, ಗೀತಾ ಪಾಟೀಲ, ಬಸಮ್ಮ ಹಾದಿಮನಿ, ರೇಷ್ಮಾ ಶೇಖ್ ಸನದಿ ಭಾಗವಹಿಸಿದ್ದರು.